ಉತ್ತರ ಕನ್ನಡಜಿಲ್ಲಾ ಸುದ್ದಿ

ಯಲ್ಲಾಪುರದಲ್ಲಿ ಭೂ ಕುಸಿತ : ಪ್ರಾಣ ಕಳೆದುಕೊಂಡ ಮಹಿಳೆ

ಕಾರವಾರ : ಮಳೆಯ ಆರ್ಭಟಕ್ಕೆ ಯಲ್ಲಾಪುರ ತಾಲೂಕಿನ ವಿವಿಧೆಡೆ ಅಪಾರ ಹಾನಿ ಉಂಟಾಗಿದೆ.ಪ್ರವಾಹದ ಹೊಡೆತಕ್ಕೆ ಸಿಲುಕಿ ಜನ ಸಂಕಷ್ಟದಲ್ಲಿದ್ದಾರೆ.ಈಗಿನ ಕಳಚೆ ಗ್ರಾಮದ ಅನೇಕ ಮನೆಗಳಿಗೆ ಹಾನಿಯಾಗಿತ್ತು. ಸಂಪರ್ಕಕ್ಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಚೆ ಸಮೀಪ ಮನೆಯೊಂದರ ಬಳಿ ಭೂಕುಸಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದೇವಕಿ ನಾರಾಯಣ ಗಾಂವ್ಕರ್ ಎನ್ನುವವರೇ ಭೂಕುಸಿತದಿಂದ ಸಾವನ್ನಪಿದ ಮಹಿಳೆ ಎನ್ನಲಾಗಿದೆ.ಭೂಕುಸಿತದಿಂದ ಐದು ಜನ ತೊಂದರೆಗೆ ಸಿಲುಕಿಕೊಂಡಿದ್ದರು. ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಂಬಿ ಹರಿಯುತ್ತಿದ್ದ ಸೇತುವೆ ದಾಟುತ್ತಿರುವ ನೀರಿನ ರಭಸಕ್ಕೆ ಹಾಸಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ನದಿಯಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

ಗುಳ್ಳಾಪುರ ಸೇತುವೆ ಕುಸಿದು ಶೇವ್ಕಾರ್, ಹಳವಳ್ಳಿ, ಕೋನಾಳ, ಕಲ್ಲೇಶ್ವರ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಮಳೆಯ ಆರ್ಭಟದಿಂದ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಅನೇಕ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button