ಕೊಡಗುಜಿಲ್ಲಾ ಸುದ್ದಿ
ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಕೂದಲಿನ ಗೆಡ್ಡೆ ಪತ್ತೆ

ಕೊಡಗು : ಜಿಲ್ಲೆಯ ಮಡಿಕೇರಿಯ ಯುವತಿಯೊಬ್ಬಳ ಹೊಟ್ಟೆಯಲ್ಲಿ ಬರೊಬ್ಬರಿ ಒಂದೂವರೆ ಕೆಜಿ ತೂಕದ ಗೆಡ್ಡೆ ಇರುವುದು ವೈದ್ಯಕೀಯ ಪರೀಕ್ಷೆ ನಡೆಸಿ ಸ್ಕ್ಯಾನಿಂಗ್ ಮಾಡಿದಾಗ ಸ್ಕ್ಯಾನಿಂಗ್ ನಲ್ಲಿ ಪತ್ತೆಯಾಗಿದೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದ 20 ವರ್ಷದ ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಗಡ್ಡೆ ಇರುವುದು ಸ್ಕ್ಯಾನಿಂಗ್‌ನಿಂದ ಪತ್ತೆಯಾಗಿದ್ದು, ವೈದ್ಯರೇ ದಂಗಾಗಿದ್ದಾರೆ.
ಯುವತಿ ಕೆಲ ವರ್ಷಗಳಿಂದ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಮನೆಯವರಿಗೆ ತಿಳಿಯದಂತೆ ಕೂದಲು ತಿನ್ನುತ್ತಿದ್ದಳು. ಇದರಿಂದಾಗಿ ಕೂದಲು ಹೊಟ್ಟೆಯಲ್ಲಿ ಸಂಗ್ರಹವಾಗಿದೆ.
ಯುವತಿಗೆ ಹೊಟ್ಟೆ ನೋವು, ವಾಂತಿ ಉಂಟಾಗುತ್ತಿತ್ತು. ರಕ್ತದ ಪ್ರಮಾಣವೂ ಕಡಿಮೆಯಾಗಿತ್ತು. ಕೂದಲು ಇರುವುದು ತಿಳಿದ ಹಿನ್ನೆಲೆಯಲ್ಲಿ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಯುವತಿಗೆ 3 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.




