ಜಿಲ್ಲಾ ಸುದ್ದಿದಾವಣಗೆರೆ
ಆರ್ ಐ ವಿರುದ್ಧ ಅವಹೇಳನಕಾರಿ ಶಬ್ಧ: ಬೇಕಿದ್ದರೆ ಕೇಸ್ ಹಾಕು ಎಂದ ಮಾಜಿ ಶಾಸಕ ಶಾಂತನಗೌಡ…!

ದಾವಣಗೆರೆ: ಹೊನ್ನಾಳಿ ಪಟ್ಟಣದ ಕಂದಾಯ ನಿರೀಕ್ಷಕನ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಶಾಂತನಗೌಡ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಹೊನ್ನಾಳಿ ಪಟ್ಟಣದ ಕಸಬಾ ಆರ್ ಐ ಗಂಗಾಧರ್ ವಿರುದ್ಧ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ, ಏನೇ ಕೆಲಸ ಆಗಬೇಕೆಂದರೂ ಇಲ್ಲಿ ಲಂಚ ಕೇಳಲಾಗುತ್ತಿದೆ. ನನ್ನ ಅವಧಿಯಲ್ಲಿ ಬಡವರಿಗೆಂದು ಮಾಡಿದ ಒಳ್ಳೆಯ ಕೆಲಸ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ. ಹಣವಿಲ್ಲದೇ ಯಾವುದೇ ಕೆಲಸ ಆಗಲ್ಲ. ಇಂತ ಅಧಿಕಾರಿಗಳಿಂದ ಜನರಿಗೆ ತುಂಬಾನೇ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಹೇಳ್ತಾರೆ. ಯಾವ ಮಟ್ಟದಲ್ಲಿ ಲಂಚದ ಹಾವಳಿ ಇದೆ ಎಂಬುದು. ನಾನು ಮಾತನಾಡಿದ್ದಕ್ಕೆ ಯಾವುದೇ ಕೇಸ್ ಬೇಕಿದ್ದರೂ ಹಾಕು. ನಾನು ಹೆದರುವುದಿಲ್ಲ. ಎಲ್ಲದಕ್ಕೂ ರೆಡಿ. ಜನರು ಹಾಗೆಯೇ ಇದ್ದಾರೆ. ಜೇಬಿನಲ್ಲಿ ಹಣ ಇಟ್ಟು ಹೋಗ್ತಾರೆ. ಇಂಥ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿಡಿದೆದ್ದಿದ್ದಾರೆ




