ಜಿಲ್ಲಾ ಸುದ್ದಿಮೈಸೂರು
ಶೂಟೌಟ್‌ನಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಜಿ ಟಿ ದೇವೇಗೌಡ ನೆರವು

ಮೈಸೂರು : ಮೈಸೂರಿನಲ್ಲಿ ಚಿನ್ನದಂಗಡಿಯಲ್ಲಿ ದರೋಡೆ ಮಾಡುವಾಗ ನಡೆದ ಶೂಟೌಟ್‌ಗೆ ಬಲಿಯಾದ ಯುವಕನ ಮನೆಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೈಸೂರು ತಾಲೂಕಿನ ದಡದಹಳ್ಳಿ ಗ್ರಾಮದ ಮೃತ ಚಂದ್ರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಕುಟುಂಬಸ್ಥರಿಗೆ 50 ಸಾವಿರ ರೂ. ಚೆಕ್ ಸಹಾಯಧನ ನೀಡಿದರು.
ಇತ್ತೀಚೆಗೆ ವಿದ್ಯಾರಣ್ಯಪುರಂನ ಚಿನ್ನದಂಗಡಿಯಲ್ಲಿ ದರೋಡೆ ವೇಳೆ ನಡೆದ ಶೂಟೌಟ್‌ನಲ್ಲಿ ಚಂದ್ರು ಸಾವಿಗೀಡಾಗಿದ್ದರು.




