ಕಸಾಪಾಗೆ ಡಾ. ಸರಸ್ವತಿ ಚಿಮ್ಮಲಗಿ ಆಯ್ಕೆ ಮಾಡಿ: ಬಿಟಿ ಲಲಿತಾ ನಾಯಕ್

ಕಲಬುರ್ಗಿ: ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಯಾರಿಗೂ ಕಡಿಮೇ ಇಲ್ಲ ಎಂಬುವುದನ್ನು ತೊರಿಸಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವೆ, ಲೇಖಕಿ ಬಿ ಟಿ ಲಲಿತಾ ನಾಯಕ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಪುರುಷರ ಸರಿ ಸಮನಾಗಿ ದುಡಿಯುವ ಮೂಲಕ ಸೈ ಎನ್ನಿಸಿಕೊಳ್ಳುತ್ತಿದ್ದಾರೆ. ಅದರಂತೆ ಸಾಹಿತ್ಯ ಕ್ಷೇತ್ರಕ್ಕೂ ಕೂಡಾ ಮಹಿಳೆಯರ ಕೊಡುಗೆ ಅಪಾರವಾಗಿದೆ. ಹೀಗಾಗಿ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಕೈಕ ಮಹಿಳೆ ಡಾ. ಸರಸ್ವತಿ ಚಿಮ್ಮಲಗಿ ಅವರನ್ನು ಆಯ್ಕೆ ಮಾಡಿ ಕನ್ನಡಮ್ಮನ ಸೇವೆಗೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದಿದಿದ್ದಾರೆ.
ಇನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಕಾಗಿರುವುದು ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡದ ಬಗ್ಗೆ ಆಸಕ್ತಿ ಇರುವಂತಹ ಮೇರು ವ್ಯಕ್ತಿತ್ವ ಉಳ್ಳವರು. ಅಂತಹ ವ್ಯಕ್ತಿತ್ವ ಕಂಡುವರುವುದು ಸರಸ್ವತಿ ಚಿಮ್ಮಲಗಿ ಅವರಲ್ಲಿ ಮಾತ್ರ ಯಾಕಂದ್ರೆ ಅವರು ಸಾಹಿತಿಗಳು ಮಾತ್ರವಲ್ಲದೆ ರಂಗಭೂಮಿ ಕಲಾವಿದರು ಸಹ ಹೌದು, ಅಲ್ಲದೆ ಕನ್ನಡದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಇಂತಹ ಕಲಾವಿದರು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾದರೆ ಕನ್ನಡವನ್ನ ಮನೆ ಮನೆಗೆ ತಲುಪಿಸಲು ಸಹಕಾರವಾಗುತ್ತದೆ. ಹೀಗಾಗಿ ಸರಸ್ವತಿ ಚಿಮ್ಮಲಗಿ ಅವರನ್ನು ಆಯ್ಕೆ ಮಾಡುವ ಮೂಲಕ ಈ ಬಾರಿ ಕನ್ನಡದ ಸೇವೆಗೆ ಮಹಿಳೆಯರಿಗೆ ಅವಕಾಶ ದೊರಕಿಸಿ ಕೊಡುವಂತೆ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.




