ಕೊಡಗುಜಿಲ್ಲಾ ಸುದ್ದಿ

ಕೊಡಗಿನ ಐವರು ಶಿಕ್ಷಕರಿಗೆ ನೇಷನ್ ಬಿಲ್ಡಿಂಗ್ ಪ್ರಶಸ್ತಿ

ಕೊಡಗು: ರೋಟರಿ ಸಂಸ್ಥೆಯಿಂದ ಕೊಡಮಾಡುವ ನೇಷನ್ ಬಿಲ್ಡಿಂಗ್ ಪ್ರಶಸ್ತಿಗೆ ಈ ಬಾರಿ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸೆ.14 ರಂದು ಸಂಜೆ 7 ಗಂಟೆಗೆ ನಗರದ ರೋಟರಿ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ‌ ಮಾಡಲಾಗುತ್ತದೆ.

ಕೂಡಿಗೆ ಕ್ರೀಡಾ ಶಾಲೆಯಲ್ಲಿ 30 ವರ್ಷ ಪ್ರಾಂಶುಪಾಲರಾಗಿದ್ದ ಕುಂತಿ ಬೋಪಯ್ಯ ಅವರು ಈ ಬಾರಿ ರೋಟರಿಯಿಂದ ಪ್ರಶಸ್ತಿಗರ ಆಯ್ಕೆಯಾಗಿರುವ ಶಿಕ್ಷಕ, ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಡಿಕೇರಿ ನಗರಸಭೆಯ ಶಾಲಾ ಶಿಕ್ಷಕಿಯರಾದ ಪ್ರಫುಲ್ಲ ದೇವರಾಜ್, ಸರೋಜಿನಿ, ರೋಜಿ, ಕಡಗದಾಳು ಶಾಲಾ ಶಿಕ್ಷಕಿ ಅನಿತಾ ಚೋಕಿರ, ಪೆರಾಜೆಯ ನಿವೖತ್ತ ಶಿಕ್ಷಕ ಹಾಗೂ ಲಗೋರಿ ಕ್ರೀಡೆಯನ್ನು ರಾಜ್ಯವ್ಯಾಪಿ ಪ್ರೋತ್ಸಾಹಿಸಿದ ದೊಡ್ಡಣ್ಣ ಬರಮೇಲು ಅವರನ್ನು ಈ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಕಾರ್ಯದರ್ಶಿ ಎಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್ , ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button