ಜಿಲ್ಲಾ ಸುದ್ದಿರಾಮನಗರ

ಶಾರ್ಟ್ ಸರ್ಕ್ಯೂಟ್ ನಿಂದ ಊದಿನಕಡ್ಡಿ ಫ್ಯಾಕ್ಟರಿಗೆ ಬೆಂಕಿ

ರಾಮನಗರ: ಶಾರ್ಟ್ ಸರ್ಕ್ಯೂಟ್ ನಿಂದ ಊದಿನಕಡ್ಡಿ ತಯಾರಿಕ ಕಾರ್ಖಾನೆಯೊಂದು ಹೊತ್ತಿ ಉರಿದಿರೋ ಘಟನೆ ರಾಮನಗರ ಜಿಲ್ಲೆ ಕನಕಪುರ‌ ತಾಲೂಕಿನ ಜಟ್ಟಿ‌ಪಾಳ್ಯ ಗ್ರಾಮದ ಬಳಿ ಸತ್ಯಂ ಸುಗಂಧಾಲಯ ಫ್ಯಾಕ್ಟರಿಯಲ್ಲಿ ನಡೆದಿದೆ.

ಸೋಮವಾರ ಸಂಜೆ ಕಾರ್ಮಿಕರೆಲ್ಲೂ ಕೆಲಸ ಮುಗಿಸಿ ಮನೆಗೆ ಹೋದ ನಂತರ ತಡ ರಾತ್ರಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ನೋಡುನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರ್ಖಾನೆ ಹೊತ್ತಿ ಉರಿದಿದೆ. ಇನ್ನು ನಾಗರಾಜ್ ಶೆಟ್ಟಿ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು, ಅದೃಷ್ಟವಷತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇನ್ನು ಆರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ರು. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button