ಜಿಲ್ಲಾ ಸುದ್ದಿಮೈಸೂರು

ಸಿಎಂ ಭರವಸೆ, ನಾಳೆಗೆ ಎನ್‌ಟಿಎಂಎಸ್ ಹೋರಾಟ ಸ್ಥಗಿತ

ಮೈಸೂರು: ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಭರವಸೆ ಮೇರೆಗೆ ಶನಿವಾರದಿಂದ ಮೈಸೂರಿನ ಎನ್‌ಟಿಎಂ ಶಾಲೆ ಉಳಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಇಂದು ಎನ್‌ಟಿಎಂ ಶಾಲೆ ಮುಂಭಾಗ ನಡೆದ 67ನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾಗ ವಿವಾದ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಹಾಗಾಗಿ, ಶನಿವಾರ ಹೋರಾಟವನ್ನು ಅಂತ್ಯಗೊಳಿಸೋಣ. ಅವಶ್ಯ ಬಿದ್ದರೆ ಕಾನೂನು ಹೋರಾಟವನ್ನೂ ಮುಂದುವರಿಸೋಣ ಎಂದು ಹೋರಾಟಗಾರರಿಗೆ ಕರೆ ನೀಡಿದರು.

ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟ ಹಾಗೂ ನಿರಂಜನ ಮಠ ಉಳಿಸಿ ಹೋರಾಟ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 6ರಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಮೂಲಕ ಒಂದಾಗಿ ಶಾಲೆ ಹಾಗೂ ನಿರಂಜನ ಮಠ ಉಳಿಸುವ ಮಾನದಂಡದಲ್ಲಿ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button