ಉತ್ತರ ಕನ್ನಡಜಿಲ್ಲಾ ಸುದ್ದಿ

ಬಸ್ ನಿಲ್ದಾಣದಲ್ಲಿ ಮಹಿಳಾ ಕಂಡಕ್ಟರ್ ಮತ್ತು ಚಾಲಕನ ಪತ್ನಿ ನಡುವೆ ಫೈಟಿಂಗ್

ಕಾರವಾರ : ಕೆ.ಎಸ್‌.ಆರ್‌.ಟಿ.ಸಿ ಮಹಿಳಾ ಕಂಡಕ್ಟರ್‌ ಮತ್ತು ಚಾಲಕನ ಪತ್ನಿ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಜುಟ್ಟು ಹಿಡಿದು ಬಸ್ ನಿಲ್ದಾಣದಲ್ಲಿ ಹೊಡೆದಾಡಿದ ಘಟನೆ ಅಂಕೋಲಾ ಬಸ್‌ ನಿಲ್ದಾಣದಲ್ಲಿ ಇಂದು ಸಂಜೆ ನಡೆದಿದೆ.

ಯಾವುದೋ ವಿಚಾರವನ್ನು ಕೆದಕಿ ತಂದ ಚಾಲಕನ ಪತ್ನಿ ಮೈಸೂರು ಕಾರವಾರ ಬಸ್ ಕಂಡಕ್ಟರ್‌ ಆಗಿದ್ದ ಮಹಿಳಾ ಕಂಡಕ್ಟರ್ ಗೆ ಜುಟ್ಟು ಹಿಡಿದು ಹೊಡೆದಿದ್ದಾಳೆ. ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿದ್ದು, ನಂತರ ನಿಲ್ದಾಣದ ಇತರೆ ಬಸ್‌ ಸಿಬ್ಬಂದಿಗಳು ಜಗಳವನ್ನು ಬಿಡಿಸಿದ್ದಾರೆ.

ಇದೀಗ ಹೊಡೆದಾಟದ ವಿಡಿಯೋ ವೈರಲ್‌ ಆಗಿದೆ. ಘಟನೆ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button