ಕೊಡಗುಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿ

ಅಪ್ಪಚ್ಚು ರಂಜನ್ ರಿಂದ ರೈತರಿಗೆ ಅವಮಾನ: ರೈತ ಮುಖಂಡರ ಆಕ್ರೋಶ

ಕೊಡಗು  : ಧರಣಿ ನಿರತ ರೈತ ಸಂಘಟನೆಗಳನ್ನು ನಕಲಿ ಸಂಘಟನೆಗಳು ನಿಂದಿಸಿದ್ದ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಸೋಮವಾರ ಪೇಟೆ ರೈತ ಸಂಘ ತಾಲೂಕು ಘಟಕ  ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಫಿ ಬೆಳೆಗಾರರ 10 ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕಾಫಿ, ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಬೆಂಬಲ ಬೆಲೆ(ಎಂಎಸ್‌ಪಿ) ನೀಡಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಡಿ.13ರಿಂದ 17 ದಿನಗಳ ಕಾಲ ಜೇಸಿ ವೇದಿಕೆಯಲ್ಲಿ ರೈತರು ಧರಣಿ ನಡೆಸಿದ್ದರು.

ಪ್ರತಿಭಟನೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಯವರು, ಗ್ರಾಮೀಣ ಭಾಗದ ರೈತರು, ಕಾರ್ಮಿಕ ಸಂಘಟನೆಗಳ ಪ್ರಮುಖರು ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಶಾಸಕರು ಪ್ರತಿಭಟನೆ ಮಾಡಿದವರನ್ನು ನಕಲಿ ರೈತರೆಂದು ನಿಂದಿಸಿರುವುದು ಜಿಲ್ಲೆಯ ರೈತರಿಗೆ ಮಾಡಿದ ಅವಮಾನ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ  ವ್ಯಕ್ತಪಡಿಸಿದರು.

ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಶಾಸಕರಿಬ್ಬರೂ ಒತ್ತಡ ತಂದು ಮುಖ್ಯಮಂತ್ರಿಗಳಿಂದ ಉಚಿತ ವಿದ್ಯುತ್ ನೀಡುವ ರೈತ ಮುಖಂಡ ಜಿ.ಎಂ.ಹೂವಯ್ಯ ಒತ್ತಾಯಿಸಿದರು. ತಪ್ಪಿದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಹೊಸಗುತ್ತಿ ಶಂಕರಪ್ಪ ಮಾತನಾಡಿ, ರೈತ ಚಳುವಳಿ ವ್ಯಕ್ತಿಯ ವಿರುದ್ಧ ಇರುವುದಿಲ್ಲ. ರೈತರು, ರೈತಸಂಘಟನೆಗಳನ್ನು ಜರಿದ ಜನಪ್ರತಿನಿಧಿಗಳು ಯಶ ಕಾಣಲು ಸಾಧ್ಯವಿಲ್ಲ. ರೈತರಿಂದ ಗೆದ್ದವರು, ರೈತರನ್ನು ನಕಲಿ ಎನ್ನಬಾರದು, ಪದವನ್ನು ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.  ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ಈ. ಸುಬ್ಬಯ್ಯ, ಜಿ.ಎಸ್.ಚಂದ್ರಶೇಖರ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button