ಜಿಲ್ಲಾ ಸುದ್ದಿ
ಅಲ್ಯುಮಿನಿಯಂ ಏಣಿಯಿಂದ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಚಿಕ್ಕಮಗಳೂರು: ಕಳಸ ತಾಲೂಕಿನ ಕುದುರೆಮುಖ ಸಮೀಪ ಕಾಫಿ ಎಸ್ಟೇಟ್ ಒಂದರಲ್ಲಿ ಮರಗಸಿ ಕೆಲಸ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ತಮಿಳುನಾಡು ಮೂಲದ ದಾಮೋದರ (55) ಕಾರ್ಮಿಕ ಬಲಿಯಾಗಿದ್ದಾನೆ.
ಅತ್ತಿಕೊಡಿಗೆ ಕಾಫಿ ತೋಟದಲ್ಲಿ ಮರ ಕಸಿ ಮಾಡುವಾಗ 11 ಕೆವಿ ವಿದ್ಯುತ್ ತಂತಿಮಾರ್ಗವಿದ್ದ ತೋಟಕ್ಕೆ ಹೋಗುತ್ತಿರುವಾಗ ಅಲ್ಯುಮಿನಿಯಂ ಏಣಿಯು ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶದಿಂದ ಅವಘಡ ಸಂಭವಿಸಿದೆ. ಕಳಸ ಠಾಣೆಯಲ್ಲಿ ದೂರು ದಾಖಲಾಗಿದೆ.





