ಚಿಕ್ಕೋಡಿಯ ಒಂದೇ ಗ್ರಾಮದಲ್ಲಿ 80 ಸಾವು; ಬೆಚ್ಚಿಬಿದ್ದ ಜನತೆ

ಚಿಕ್ಕೋಡಿ: ಹಳ್ಳಿಯಲ್ಲಿ ಒಂದೇ ತಿಂಗಳಲ್ಲಿ 80 ಸಾವು, ಸಾವಿನ ಸರಣಿಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ತಿರುಗಿ ನೋಡುತ್ತಿಲ್ಲ ರಾಜಕಾರಣಿಗಳು.
ಚಿಕ್ಕೋಡಿಯ ಸಂವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 80 ಜನರು ಸಾವನ್ನಪ್ಪಿದ್ದಾರೆ. ಸತತ ಸಾವಿನಿಂದ ಬೆಚ್ಚಿಬಿದ್ದ ಗ್ರಾಮಸ್ಥರು ಹೈರಾಣಾಗಿ ಕುಳಿತುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಂವಸುದ್ದಿ ಗ್ರಾಮದಲ್ಲಿ ಈ ಸರಣಿ ಸಾವುಗಳು ಸಂಭವಿಸುತ್ತಿದ್ದು ಇದುವರೆಗೂ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಎಂಬತ್ತು ಜನ ಸತ್ರೂ ಹತ್ತು ಜನ ಮೃತಪಟ್ಟಿದ್ದಾರೆ ಅಂತಾ ಪಿಡಿಓ ವರದಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸ್ಥಳೀಯ ಶಾಸಕ ಪಿ.ರಾಜೀವ್ ಕೂಡ ಗ್ರಾಮದ ಕಡೆ ತಿರುಗಿ ನೀಡಿಲ್ಲ. ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,ಶಾಸಕರು ನಮ್ಮ ಪಾಲಿಗೆ ಇದಾನೋ ಸತ್ತಾನೋ ಗೊತ್ತಿಲ್ಲ. ನಮ್ಮ ಗ್ರಾಮಕ್ಕೆ ಇನ್ನೊಮ್ಮೆ ವೋಟ್ ಕೇಳಲು ಬಂದರೆ ಬಿಡಲ್ಲ ಎನ್ನುತ್ತಿದ್ದಾರೆ
ವೈದ್ಯರ ನಡೆ ಹಳ್ಳಿ ಕಡೆ ಎನ್ನುವ ಅಧಿಕಾರಿಗಳು ಇದುವರೆಗೂ ಈ ಗ್ರಾಮದ ಹತ್ತಿರ ಸುಳಿದಿಲ್ಲ. ಜನ ಸಾಯುತ್ತಿದ್ದರೂ ಒಂದೇ ಒಂದು ಮಾತ್ರೆಯನ್ನೂ ಆರೋಗ್ಯ ಇಲಾಖೆ ಒದಗಿಸಿಲ್ಲವಂತೆ. ನಾಗರಿಕರು ಗ್ರಾಮಕ್ಕೆ ಬಂದು ನಮ್ಮನ್ನ ರಕ್ಷಣೆ ಮಾಡಿ ಅಂತಾ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ
ಮತ್ತೊಂದೆಡೆ ಗ್ರಾಮಸ್ಥರು ಕೊವಿಡ್ ಟಿಸ್ಟ್ ಮಾಡಿಸದೆ ಮನೆಯಲ್ಲಿ ಉಳಿದುಕೊಂಡಿರುವುದೇ ಹೆಚ್ಚಿನ ಸಾವುಗಳಿಗೆ ಕಾರಣ ಎನ್ನಲಾಗುತ್ತಿದೆ. ಕೊವಿಡ್ ಆಸ್ಪತ್ರೆ ವೆಚ್ಚ ಹೆಚ್ಚಾಗುತ್ತದೆ ಎಂದು ಹೆದರಿ ಟೆಸ್ಟ್ ಮಾಡಿಸದೆ ಮನೆಯಲ್ಲೆ ಗ್ರಾಮಸ್ಥರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.




