ಕೋಲಾರಜಿಲ್ಲಾ ಸುದ್ದಿ
ಉತ್ತಮ ಬೆಲೆ ಇದ್ದರು ಮಳೆಗೆ ಸಿಲುಕಿ ನಾಶವಾದ ಟೊಮೇಟೊ: ಸಂಕಷ್ಟದಲ್ಲಿ ಬೆಳೆಗಾರರು

ಕೋಲಾರ: ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದ ಕೋಲಾರ ಜಿಲ್ಲೆಯಲ್ಲಿ ಈ ಭಾರಿ ಬಿದ್ದ ಧಾರಾಕಾರ ಮಳೆಗೆ ಜಿಲ್ಲೆಯ ಕೆರೆ ಕುಂಟೆಗಳು ಸಂಪೂರ್ಣವಾಗಿ ತುಂಬಿ ಕೋಡಿ ಹರಿದಿವೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಕೆರೆಗಳು ಕೋಡಿ ಹರಿದ ನೀರು ರೈತರ ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಹೂವು ಮತ್ತು ತರಕಾರಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಕಳೆದ ಒಂದು ವರ್ಷದಿಂದ ರೈತನ ತರಕಾರಿಗಳಿಗೆ ಬೆಲೆ ಸಿಗದೆ ತೀವ್ರ ನಷ್ಟವಾಗಿದ್ದ ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಟಮೋಟಗೆ ಉತ್ತಮ ಬೆಲೆ ಸಿಕ್ಕಿದೆ ಆದರೆ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ರೈತ ಬೆಳೆದ ಟಮೋಟ ಬೆಳೆ ಜಲಾವೃತವಾಗಿ ನಾಶವಾಗಿದೆ.
ಧಾರಾಕಾರ ಮಳೆಗೆ ಬೆಲೆ ಬಾಳುವ ರೋಜಾ ಹೂವು, ಟೊಮೇಟೊ ಬೆಳೆಗಳು ನೀರು ಪಾಲಾಗಿರುವುದರಿಂದ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ರೈತ ಸಿಲುಕಿದ್ದಾನೆ.




