ಡಿಸಿಪಿ ನಗರ ಪ್ರದಕ್ಷಿಣೆ ಅನಗತ್ಯ ರಸ್ತೆಗೆ ಇಳಿದ ವಾಹನಗಳ ಸೀಜ್

ಕಲಬುರಗಿ: ನೆರೆ ರಾಜ್ಯಗಳಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ವೀಕೇಂಡ್ ಕರ್ಫ್ಯೂ ಹಿನ್ನಲೆ ಕಲಬುರಗಿಯಲ್ಲಿ ಬೇಕಾ ಬಿಟ್ಟಿ ಓಡಾಡುತ್ತಿದ್ದ ಜನರ ವಾಹನಗಳನ್ನು ಸೀಜ್ ಮಾಡುವ ಮೂಲಕ ಡಿಸಿಪಿ ಬಿಸಿ ಮುಟ್ಟಿಸಿದರು.
ವಿಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಡಿಸಿಪಿ ಅಡ್ಡೂರು ಶ್ರೀನಿವಾಸಲು ಸಿಟಿ ರೌಂಡ್ಸ್ ನಡೆಸಿ, ಹಲವಡೆ ರಸ್ತೆಗಿಳಿದು ಹೋಗಿ ಬರುವ ವಾಹನಗಳನ್ನು ಪರಿಶೀಲಿಸಿ ಸುಖಾಸುಮ್ಮನೆ ಓಡಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು, ಟಂಟಂಗಳಲ್ಲಿ ಪೋಲಿಸ್ ಪರೇಡ್ ಮೇದಾನಕ್ಕೆ ಕಳುಹಿಸಿದರು. ನಗರದ ಸರ್ಧಾರ ವಲ್ಲಭ ಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ಸೂಪರ್ ಮಾಕೇಟ್, ಕಿರಾಣಾ ಬಜಾರ ಸೇರಿದಂತೆ ವಿವಿಧೆಡೆ ಸಿಟಿ ರೌಂಡ್ಸ್ ನಡೆಸಿ, ಅನಾವಶ್ಯಕ ತಿರುಗಾಡುತ್ತಿದ್ದವ್ರಿಗೆ ಶಾಕ್ ಕೊಟ್ಟ ಡಿಸಿಪಿ ಶ್ರೀನಿವಾಸಲು ಹಲವಡೆ ಕಾರ್‌ಗಳನ್ನು ಸಹ ಸೀಜ್ ಮಾಡಿದರು.
ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್‌ನಲ್ಲಿ ವೀಕೆಂಡ್ ಕರ್ಫ್ಯೂಗೆ ಕ್ಯಾರೆ ಅನ್ನದ ಹಲವಾರು ಅಂಗಡಿ, ಮುಂಗಟ್ಟುಗಳ ಮಾಲಿಕರುಗಳಿಗೆ ಬ್ರಹ್ಮಪೂರ ಪಿಐ ಬಿಸಿ ಮುಟ್ಟಿಸುವುದರ ಮೂಲಕ ಎರಡು ಮೂರು ಬಾರಿ ರೌಂಡ್ ನಡೆಸಿ, ಬೀದಿ ಬೀದಿ ಬದಿಯಲ್ಲಿ ಬಂಡಿಗಳಲ್ಲಿ ಹಣ್ಣು ಮಾರಾಟ ಮಾಡುವರನ್ನು ಎಚ್ಚರಿಕೆ ನೀಡಿ, ಒಂದೆ ಕಡೆ ನಿಲ್ಲದೇ, ಓಣಿ ಗಳಲ್ಲಿ ಬಂಡಿಯಲ್ಲಿ ಮಾರಾಟಕ್ಕೆ ಸೂಚನೆ ನೀಡಿದರು. ಆದರೂ ಕೆಲವು ಬಟ್ಟೆ ಅಂಗಡಿಗಳು, ಸ್ಟೇಷನರಿ ಶಾಪ್‌ಗಳು, ಝರಾಕ್ಸ್, ಟೈಪರೆಟಿಂಗ್ ಶಾಪ್‌ಗಳು ರ‍್ಧ ಶೆಟ್ಟರ್ ತೆರೆದು ವಹಿವಾಟು ನಡೆಸುತ್ತಿದ್ದು ಅಲ್ಲಲ್ಲಿ ಕಂಡು ಬಂದಿತ್ತು.




