ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ: ಸಾಮಾಜಿಕ ಜಾಲತಾಣದಲ್ಲಿ ಪೋಟೊ ವೈರಲ್​​​

ಧಾರವಾಡ: ಮಾರಕಾಸ್ತ್ರದಿಂದ ಕೆಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ‌ ಯುವಕನೋರ್ವ ಹುಚ್ಚಾಟ ಮೆರೆದಿರುವ ಘಟನೆ ಧಾರವಾಡದ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿಯ ಸಾಯಿ ದಾಬಾದಲ್ಲಿ ನಡೆದಿದೆ.

ಕಳೆದ ದಿನ ತಡ ರಾತ್ರಿ ಸಾಯಿ ದಾಬಾ ಮಾಲೀಕನ ಪುತ್ರ ಪ್ರವೀಣ್ ಸಂದಿಮನಿ ಎಂಬುವವನೇ ಮಾರಕಾಸ್ತ್ರದಿಂದ ಕೆಕ್ ಕಟ್ ಮಾಡಿದ್ದ ಯುವಕನಾಗಿದ್ದಾನೆ. ಕಳೆದ ದಿನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಮ್ಮದೇ ಒಡೆತನದ ದಾಬಾದಲ್ಲಿ ಪ್ರವೀಣ್ ತಲ್ವಾರಿನಿಂದ ಕೆಕ್ ಕತ್ತರಿಸಿದ್ದಾನೆ. ಯುವಕ ಕೆಕ್ ಕಟ್ಟ ಮಾಡಿದ ವಿಡಿಯೋ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿವೆ.

ಇನ್ನೂ ಯುವಕ ಪ್ರವೀಣ್ ಹುಚ್ಚಾಟ ವಿಡಿಯೋ ನೋಡಿದ ಅವಳಿ ನಗರ ಜನತೆ ಇಂತಹ ಮನಸ್ಥಿತಿ ಇರುವವರ ವಿರುದ್ಧ ಪೊಲೀಸ ಇಲಾಖೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಮಾರಕಾಸ್ತ್ರಗಳನ್ನು ಹೊಂದುವುದೇ ದೊಡ್ಡ ಅಪರಾಧವಾಗಿದ್ದು, ಆದರೂ ಕೂಡಾ ಈ ಯುವಕ ತಲ್ವಾರನಿಂದ ಕೆಕ್ ಕತ್ತರಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯಾವ ಕ್ರಮ ಜರುಗಿಸುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button