ಜೈಲುವಾಸಿಗಳ ಸಂದರ್ಶನಕ್ಕೆ ಹೈಟೆಕ್ ಟಚ್ ನೀಡಿದ ಧಾರವಾಡ ಕೇಂದ್ರ ಕಾರಾಗೃಹ

ಧಾರವಾಡ: ಜಗತ್ತಿನಲ್ಲಿ ಕೊರೊನಾ ಮಾಹಾಮಾರಿ ವೈರಸ್ ಬಿದಿದ್ದೆ ಬಂದಿದ್ದು, ಹಲವು ಕ್ಷೇತ್ರಗಳಲ್ಲಿ ಕೆಲವಷ್ಟು ಬದಲಾವಣೆಗಳನ್ನು ತಂದಿದೆ. ಅಂತಹದೇ ಬದಲಾವಣೆಯನ್ನು ಈಗ ನಾವು ಕೇಂದ್ರ ಕಾರಾಗೃಹದಲ್ಲಿಯು ಕೂಡಾ ಕಾಣಬಹುದಾಗಿದೆ. ಕೊವೀಡ್-19 ವೈರಸ್ ಬಂದ ನಂತರ ಕುಟುಂಬಸ್ಥರ ಧ್ವನಿ ಕೇಳದೇ, ಮುಖ ನೋಡದೇ ಅಪರಾಧಿಗಳು ಸೇರಿದಂತೆ ಆರೋಪಿಗಳು ಮಂಕಾಗಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಈಗ ಧಾರವಾಡ ಕೇಂದ್ರ ಕಾರಾಗೃಹ ಅಧಿಕಾರಿಗಳ ವಿನೂತನ ಪ್ರಯತ್ನದಿಂದಾಗಿ ಜೈಲಿನ ಬಂಧಿಗಳು ಸೇರಿದಂತೆ ಅವರ ಕುಟುಂಬಸ್ಥರಲ್ಲಿ ನಿರಾಳ ಭಾವನೆ ಮೂಡಿದೆ. ಈಗ ಖುದ್ದಾಗಿ ಯಾರ ಭಯವಿಲ್ಲದೆ ಹಾಗೂ ಆತಂಕವಿಲ್ಲದೆ ಜೈಲು ಬಂಧಿಗಳು ತಮ್ಮ ಸಂಬಂಧಿಗಳ ಜೊತೆಗೆ ಮಾತುಕತೆ ನಡೆಸಬಹುದಾಗಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿ, ಜೈಲುವಾಸಿಗಳಾಗಿರುವ ಅಪರಾಧಿಗಳು ಹಾಗೂ ಅರೋಪಿಗಳು ತಮ್ಮ ಕುಟುಂಬ ಸದಸ್ಯರ ಜೊತೆ ವೈಯಕ್ತಿಕವಾಗಿ ಮಾತನಾಡಲು ಹೈಟೆಕ್ ತಂತ್ರಜ್ಞಾನದೊಂದಿಗೆ, ದಕ್ಷಿಣ ಕೊರಿಯಾ ಮಾದರಿಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಸಂದರ್ಶಕ ಕೊಠಡಿಯೊಂದನ್ನು ನಿರ್ಮಿಸಲಾಗಿದೆ. ಇದು ಈಗ ಜೈಲಿನಲ್ಲಿರುವ ಹಾಗೂ ಅವರ ಕುಟುಂಬಸ್ಥರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಜೈಲುವಾಸಿ ಹಾಗೂ ಕುಟುಂಬಸ್ಥರ ನಡುವೆ ಇರುತ್ತೆ ಬುಲೆಟ್ ಪ್ರೂಫ್ ಗ್ಲಾಸ್:
ಇಷ್ಟು ದಿನ ಜೈಲಿನಲ್ಲಿರುವ ಬಂಧಿಗಳು ಹಾಗೂ ಅವರ ಸಂಬಂಧಿಗಳು ಒಮ್ಮೆಲೆ, ಒಂದೇ ಜಾಗದಲ್ಲಿ ಎಲ್ಲರೂ ತಮ್ಮ ತಮ್ಮ ಸಂಬಂಧಿಗಳ ಜೊತೆಗೆ ಮಾತನಾಡಬೇಕಿತ್ತು. ಹಾಗಾಗಿ ಕೆಲವರಿಗೆ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಅಲ್ಲದೆ ಇದೇ ಸಮಯದಲ್ಲಿ ಮಾದಕ ವಸ್ತುಗಳ ಸರಬಾರಜುಗಳು ಕೂಡಾ ನಡೆಯುತ್ತವೆ ಎಂಬ ಆರೋಪಗಳು ದೊಡ್ಡ ಮಟ್ಟಿಗೆ ಕೇಳಿ ಬರುತ್ತಿದ್ದವು. ಇದನ್ನೆಲ್ಲ ತಪ್ಪಿಸುವ ದೃಷ್ಠಿಯಿಂದ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿನೂತನ ತಂತ್ರಜ್ಞಾನದ ಮೂಲಕ ಖೈದಿಗಳು ಹಾಗೂ ಅವರ ಕುಟುಂಬದವರು ಪರಸ್ಪರ ಮಾತನಾಡಲು ವಿಭಿನ್ನ ಬಗೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಖೈದಿಗಳು ಮತ್ತು ಅವರ ಸಂಬಂದಿಕರು ಸಣ್ಣ ಸಣ್ಣ ಕೌಂಟರಗಳ ಮುಖಾಂತರ ಎದುರು – ಬದುರು ಕುಳಿತುಕೊಂಡು ಮಾತನಾಡುವ ವ್ಯವಸ್ಥೆ ಇದ್ದಾಗಿದ್ದು, ಇಲ್ಲಿ ಕೇವಲ ಮಾತುಕತೆ ಹಾಗೂ ಪರಸ್ಪರ ನೋಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲುವಾಸಿ ಹಾಗೂ ಕುಟುಂಬಸ್ಥರ ಪ್ರತ್ಯೇಕವಾಗಿ ಮಾತನಾಡಲು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರ ನಡುವೆ ಬುಲೆಟ್ ಪ್ರೂಫ್ ಗ್ಲಾಸ ಹಾಕಲಾಗಿದ್ದು, ಇದರಿಂದಾಗಿ ಯಾವುದೇ ತರಹದ ಮಾದಕ ವಸ್ತುಗಳ ಸರಬರಾಜು ಆಗಲು ಅವಕಾಶ ಇರುವುದಿಲ್ಲ. ಅಲ್ಲದೆ ಯಾವುದೇ ಅಹಿತಕರ ಘಟನೆ ಕೂಡಾ ನಡೆಯದಂತೆಯು ಕೂಡಾ ಎಚ್ಚರಿಕೆವಹಿಸಿ ಸಂದರ್ಶನ ಕೊಠಡಿ ಹಾಗೂ ಕೌಟರಗಳನ್ನು ನಿರ್ಮಿಸಲಾಗಿದೆ.
ಜೈಲು ಬಂಧಿಗಳಿಗೆ ಕುಟುಂಬಸ್ಥರು ನೀಡುವ ವಸ್ತುಗಳ ಮೇಲೆ ಹದಿನ ಕಣ್ಣು:
ಈ ಯೋಜನೆಗೆ ಒಟ್ಟು 18 ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ದು, ಇಬ್ಬರ ಮಧ್ಯೆ ಇರುವ ಗಾಜು ಬುಲೆಟ್ ಪ್ರೂಫ್‌ದಾಗಿರುತ್ತದೆ. ಕುಟುಂಬದವರು ತಂದು ನೀಡುವ ಬ್ಯಾಗ್ಗಳನ್ನು ವಿಮಾನ ನಿಲ್ದಾಣದಲ್ಲಿನ ವ್ಯವಸ್ಥೆಯಂತೆ ಸ್ಕ್ಯಾನ್ ಮಾಡಲು ಹೈಟೆಕ್ ಯಂತ್ರಗಳ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತದೆ. ಇನ್ನು ಸಂದರ್ಶಕರ ಕೊಠಡಿಗೆ ಬರುವ ಖೈದಿಗಳ ವಿವರ ಆಟೋಮ್ಯಾಟಿಕ್ ಯಂತ್ರದ ಮೂಲಕ ದಾಖಲಾಗುತ್ತದ್ದು, ಜೈಲುವಾಸಿಗಳನ್ನು ಯಾರು ಎಷ್ಟು ಹೊತ್ತಿಗೆ, ಎಷ್ಟು ಸಮಯ ಭೇಟಿ ಮಾಡಿದರು ಅನ್ನುವ ಸಮಗ್ರ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಜೊತೆಗೆ ಕೈದಿಗಳು ಕುಳಿತುಕೊಳ್ಳುವ ಪ್ರದೇಶದಲ್ಲಿಯೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಮುನೇಚ್ಚರಿಕೆಯನ್ನು ಇಲ್ಲಿ ವಹಿಸಲಾಗಿದೆ.
1 ಸಂದರ್ಶನ ಕೊಠಡಿಯಲ್ಲಿ 6 ಸಂದರ್ಶನ ಕೌಟರ್ ನಿರ್ಮಾಣ:
ಜೈಲು ಬಂಧಿಗಳು ಹಾಗೂ ಕುಟುಂಬಸ್ಥರು ಮಾತುಕತೆಗೆ ಮುಕ್ತವಾದ ಅವಕಾಶ ನೀಡುವ ನಿಟ್ಟಿನಲ್ಲಿ ಎಲ್ಲ ಕೇಂದ್ರ ಕಾರಾಗೃಹದಲ್ಲಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ನಿರ್ದೇಶನ ಮೇರೆಗೆ, ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಒಂದು ಸಂದರ್ಶನ ಕೊಠಡಿಯನ್ನು ನಿರ್ಮಿಸಲಾಗಿದೆ. ಅದರಲ್ಲಿ 6 ಸಂದರ್ಶನ ಕೌಂಟರಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಕೌಟರನಲ್ಲಿ ಪರಸ್ಪರ ಕಷ್ಟ ಸುಖ ಹಂಚಿಕೊಳ್ಳಲು ಟೆಲಿಪೋನಗಳನ್ನು ಇಡಲಾಗಿದ್ದು, ಒಬ್ಬರನೊಬ್ಬರು ನೋಡಿಕೊಂಡು ಟೆಲಿಪೋನ್ ಮೂಲಕ ಮಾತನಾಡಬಹುದಾಗಿದೆ. ಅಲ್ಲದೆ ಏಕಕಾಲದಲ್ಲಿ 6 ಜನ ಜೈಲು ಬಂಧಿಗಳು ತಮ್ಮ ಸಂಬಂಧಿಗಳೊಂದಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇನ್ನೂ ಜೈಲುವಾಸಿಗಳ ಭೇಟಿಗೆ ಬಂದ ಕುಟುಂಬಸ್ಥರಿಗೆ ಕಾಯಲು ಕೂಡಾ ವ್ಯವಸ್ಥೆ ಇದ್ದು, ಪ್ರತಿಯೊಬ್ಬ ಭೇಟಿಗಾರರು ತಮ್ಮ ಆಧಾರ ಕಾರ್ಡನ ಜೊತೆಗೆ ವಿವರ ನೀಡಿ ನೊಂದಣಿ ಮಾಡಬೇಕಾಗುತ್ತದೆ. ಬಳಿಕ ಜೈಲುವಾಸಿಗನ್ನು ಅವರು ಭೇಟಿಯಾಗಬಹುದಾಗಿದೆ.

ಇನ್ನೂ ಕುರಿತು ಧಾರವಾಡ ಕೇಂದ್ರ ಕಾರಾಗೃಹ ಜೈಲು ಅಧೀಕ್ಷಕ ಎಂ.ಎ.ಮರೀಗೌಡರವರು ಮಾತನಾಡಿ, ಈ ಹಿಂದೆ ಜೈಲು ಬಂಧಿಗಳು ಕುಟುಂಬಸ್ಥರ ಭೇಟಿಗೆ ಬಂದಾಗ ಒಮ್ಮೆಲೆ ಎಲ್ಲರನ್ನು ಮಾತುಕತೆ ಮಾಡಲು ಬೀಡಲಾಗುತಿತ್ತು. ಆಗ ಜೈಲುವಾಸಿಗಳ ಮತ್ತು ಕುಟುಂಬಸ್ಥರ ಮಾತುಕತೆಯಲ್ಲಿ ಗೌಪ್ಯತೆ ಇರುತ್ತಿರಲಿಲ್ಲ. ಇದರಿಂದಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ವಿನೂತನ ಕೊಠಡಿಗಳನ್ನು ಮಾಡಲಾಗಿದೆ. ಇದರಿಂದಾಗಿ ಈಗ ಏಕಕಾಲದಲ್ಲಿ 6 ಜನ ಬಂಧಿಗಳು ತಮ್ಮ ಕುಟುಂಬಸ್ಥ ಹಾಗೂ ಸಂಬಂಧಿಗಳೊಂದಿಗೆ ಗೌಪತ್ಯೆಯೊಂದಿಗೆ ಮಾತುಕತೆ ಮಾಡಬಹುದಾಗಿದೆ. ಈಗ ಇದಕ್ಕೆ ಉತ್ತಮವಾದ ರೆಸ್ಪನ್ಸ್ ಸಿಗುತ್ತಿದ್ದು, ಭೇಟಿಗೆ ಬಂದ ಅಪರಾಧಿಗಳ ಕೂಡಾ ಕೋಣೆಯೊಂದು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟನಲ್ಲಿ ಇಷ್ಟುದಿನ ಗುಂಪಿನಲ್ಲಿ ಗೋವಿಂದ ಎನ್ನುವ ರೀತಿಯಲ್ಲಿ ಜೈಲು ಬಂಧಿಗಳು ಕುಟುಂಬಸ್ಥರನ್ನು ಭೇಟಿ ಮಾಡಬೇಕಾಗಿತ್ತು. ಆದರೆ ಅದಕ್ಕೆ ಈಗ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಗುಡ ಬೈ ಹೇಳಲಾಗಿದ್ದು, ಹೊಸ ಮಾದರಿಯಲ್ಲಿ ಬಂಧಿಗಳನ್ನು ಅವರ ಕುಟುಂಬಸ್ಥರು ಭೇಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಜೈಲಿನ ಒಳಗೆ ಸರಬರಾಜು ಆಗುತ್ತಿದ್ದ ಮಾದಕ ವಸ್ತುಗಳ ತಡೆಗೂ ಕೂಡಾ ಇದು ಸಹಕಾರಿಯಾಗಿದ್ದು, ಧಾರವಾಡ ಕೇಂದ್ರ ಕಾರಾಗೃಹ ಪೊಲೀಸರ ಈ ವಿನೂತನ ಪ್ರಯತ್ನಕ್ಕೆ ಅಫರಾಧಿಗಳು ಸೇರಿದಂತೆ ಅವರ ಕುಟುಂಬಸ್ಥರ ಮೆಚ್ಚುಗೆ ಪಡೆದುಕೊಂಡಿದೆ.




