ಜಿಲ್ಲಾ ಸುದ್ದಿಮೈಸೂರು
ಮೈಸೂರಿನಲ್ಲಿ ಪಟಾಕಿ ಖರೀದಿ ಬಲುಜೋರು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸಿರು ಪಟಾಕಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೊರೋನಾ ಕ್ಷೀಣಿಸಿದ ಬಳಿಕ ದೀಪಾವಳಿ ಹಬ್ಬ ಬಂದಿರುವ ಕಾರಣ ಪಟಾಕಿ ಖರೀದಿ ಬಹಳ ಜೋರಾಗಿದೆ.
ನಗರದ ಜೆ.ಕೆ. ಮೈದಾನದಲ್ಲಿ ಹತ್ತಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಿದ್ದು, ಈ ಬಾರಿ ಕೇಂದ್ರದ ಮಾರ್ಗಸೂಚಿಯಂತೆ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ಹಸಿರು ಪಟಾಕಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ವರ್ಷ ಕರೋನಾ ಕಾರಣದಿಂದ ವ್ಯಾಪಾರಸ್ಥರು ಕೈ ಸುಟ್ಟಿಕೊಂಡಿದ್ದರು. ಆದರೆ ಈ ಬಾರಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಟಾಕಿ ವ್ಯಾಪಾರ ಚೇತರಿಸಿಕೊಂಡಿದೆ.
ನೂರಾರು ಜನ್ರು ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲರೂ ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ. ಹಸಿರು ಪಟಾಕಿಯು ಪರಿಸರಕ್ಕೆ ಪೂರಕವಾಗಿದ್ದು, ಅತೀ ಹೆಚ್ಚು ಹೊಗೆ ಇಲ್ಲದ ಕಾರಣ ಸರ್ಕಾರವೇ ಹಸಿರು ಪಟಾಕಿಗೆ ಅನುಮತಿ ನೀಡಿದೆ. ಒಟ್ಟಾರೆ ಮೈಸೂರಿನಲ್ಲಿ ಪಟಾಕಿ ಖರೀದಿ ಬಲು ಜೋರಾಗಿದೆ.




