ಇತರ ಕ್ರೀಡೆಕ್ರೀಡೆಜಿಲ್ಲಾ ಸುದ್ದಿದಾವಣಗೆರೆ

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ದಾವಣಗೆರೆ ತನುಜಾ

ದಾವಣಗೆರೆ: ಇತ್ತೀಚೆಗೆ ಹಿಮಾಚಲ ಪ್ರದೇಶದ ಸೋಲಾನ್​ನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​ನಲ್ಲಿ ದಾವಣಗೆರೆಯ ತನುಜಾ ಚಿನ್ನದ ಪದಕವನ್ನು ಗಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರದ ನಿವಾಸಿ ಶಿಕ್ಷಕ ಸತೀಶ್ ಹಾಗೂ ಕವಿತಾ ದಂಪತಿ ಪುತ್ರಿಯಾದ ತನುಜಾ, ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಆಂಗ್ಲ ಮಾಧ್ಯಯ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಹೊನ್ನಾಳಿ ತಾಲೂಕಿನ ಅಂಬೇಡ್ಕರ ಎಂಬ ಕರಾಟೆ ಶಿಕ್ಷಕರ ಮಾರ್ಗದರ್ಶನದಲ್ಲಿ
ತನುಜಾ ಕರಾಟೆ ತರಬೇತಿ ಪಡೆದಿದ್ದಾಳೆ.

ಕಳೆದ ಎರಡು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಸೋಲಾನ್​ನಲ್ಲಿ ಹೈಸ್ಕೂಲ್ ಮಕ್ಕಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಲ್ಲಿ ನಡೆದ ಸ್ಪರ್ಧೆಯಲ್ಲಿ ತನುಜಾ ಪಾಲ್ಗೊಂಡಿದ್ದಳು. ಸತತ ಮೂರು ಸುತ್ತಿನಲ್ಲಿ ಎದುರಾಳಿಗೆ ಸಖತ್ ಪಂಚ್ ನೀಡಿ, ಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

Spread the love

Related Articles

Leave a Reply

Your email address will not be published. Required fields are marked *

Back to top button