ದಾವಣಗೆರೆ
ದಾವಣಗೆರೆಯ ಯಲವಟ್ಟಿಯಲ್ಲಿ ಪುನೀತ್ ರಾಜಕುಮಾರ್ 9ನೇ ದಿನದ ಪುಣ್ಯಾರಾಧನೆ

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನಗಲಿ ಇಂದಿಗೆ 9 ನೇ ದಿನ. ಇಡೀ ರಾಜ್ಯವೇ ಇಂದಿಗೂ ಕಣ್ಣೀರು ಸುರಿಸುತ್ತಿದೆ. ಎಲ್ಲೆಡೆಯೂ ಪೂಜೆ, ಪುನಸ್ಕಾರ ಆರಾಧನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ನಟಸಾರ್ವಭೌಮನ ಸ್ಮರಿಸುವ ಕಾರ್ಯವೂ ಆಗುತ್ತಿದೆ.
ಪುನೀತ್ ರಾಜ್‍ಕುಮಾರ್ ರವರ ಪುಣ್ಯಾರಾಧನೆಯನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ನಡೆಸಲಾಯಿತು.
ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಪುನೀತ್ ರಾಜ್‍ಕುಮಾರ್ ರವರ 9ನೇ ದಿನದ ಪುಣ್ಯಾರಾಧನೆಯನ್ನು ಯುವಕರು ಮಾಡಿದರು. ಇದೇ ವೇಳೆ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಪಲಾವ್, ಕೇಸರಿ ಬಾತ್ ಊಟದ ವ್ಯವಸ್ಥೆ ಮಾಡಿದ್ದರು.




