ಕಲಬುರ್ಗಿಜಿಲ್ಲಾ ಸುದ್ದಿ

Murder; ಕೌಟುಂಬಿಕ ಕಲಹ: ಕಟ್ಟಿಗೆಯಿಂದ ಹೊಡೆದು ಪತ್ನಿ, ಮಗಳನ್ನು ಕೊಲೆಗೈದ ಪಾಪಿ

ಕಲಬುರಗಿ: ಪತ್ನಿಯ ಶೀಲ ಶಂಕಿಸಿದ ಪಾಪಿ ಗಂಡನೋರ್ವ ಕಟ್ಟಿಗೆಯಿಂದ ಹೊಡೆದು ತನ್ನ ಪತ್ನಿ ಮತ್ತು ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಡೆದಿದೆ.

ದಿಗಂಬರ್ (46) ಕೊಲೆ ಮಾಡಿದ ಪಾಪಿ. ಈತನ ಪತ್ನಿ ಜಗದೀಶ್ವರಿ (45) ಮಗಳು ಪ್ರಿಯಾಂಕಾ (11) ಕೊಲೆಯಾದ ದುರ್ದೈವಿಗಳು. ಕಲಬುರಗಿ ನಿವಾಸಿಯಾಗಿದ್ದ ದಿಗಂಬರ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಇತ್ತೀಚಿಗಷ್ಟೇ ಕಲಬುರ್ಗಿಯಿಂದ ಸೇಡಂ ಪಟ್ಟಣಕ್ಕೆ ಬಂದು ಇಲ್ಲಿಯೇ ಉಪಜೀವನ ನಡೆಸುತ್ತಿದ್ದರು.

ಮಧ್ಯರಾತ್ರಿ ಮನೆಯಲ್ಲಿ ಕೊಲೆ ಮಾಡಿದ್ದಾನೆ. ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿ ದಿಗಂಬರ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಖೆ ನಡೆಸುತ್ತಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button