ದಕ್ಷಿಣ ಕನ್ನಡ
ಸಮುದ್ರ ತೀರದಲ್ಲಿ ಅಪರಿಚಿತ ಯುವತಿಯ ಮೃತದೇಹ

ಮಂಗಳೂರು: ಅಪರಿಚಿತ ಯುವತಿಯೋರ್ವಳ ಮೃತದೇಹ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಹೊಯ್ಗೆಬಜಾರ್ ಎಂಬಲ್ಲಿ ಸಮುದ್ರದ ದಡದಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಧಕ್ಕೆಗೆ ತೆರಳುತ್ತಿದ್ದಾಗ ಕಡಲ ತೀರದಲ್ಲಿ ಯುವತಿಯ ಮೃತದೇಹ ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಆಂಬುಲೆನ್ಸ್ ಮೂಲಕ ಮೃತದೇಹವನ್ನು ಸರ್ಕಾರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ.
ಯುವತಿಯ ಕಪ್ಪು ಟೀ-ಶರ್ಟ್, ನೀಲಿ ಪ್ಯಾಂಟ್ ಧರಿಸಿದ್ದು, ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆಯಿದೆ. ಉದ್ದ ಕೂದಲು ಹೊಂದಿದ್ದು, ಸುಮಾರು 5 ಅಡಿ ಎತ್ತರದ ಯುವತಿಯ ಮೃತದೇಹದಲ್ಲಿ ಯಾವುದೇ ಗಾಯದ ಕಲೆಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲಎಂದು ಪೊಲೀಸರು ತಿಳಿಸಿದ್ದಾರೆ.




