ಉತ್ತರ ಕನ್ನಡಜಿಲ್ಲಾ ಸುದ್ದಿ

ದಾಂಡೇಲಿಯಲ್ಲಿ ಮತ್ತೆ ಊರೊಳಗೆ ನುಗ್ಗಿದ ಮೊಸಳೆ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಕಾರವಾರ : ಜನವಸತಿ ಪ್ರದೇಶದ ರಸ್ತೆ ಪಕ್ಕದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ದಾಂಡೇಲಿ ನಗರದ ಕೋಗಿಲಬನ ಗ್ರಾಮದಲ್ಲಿ ನಡೆದಿದೆ.

ಇಂದು ಗ್ರಾಮದ ಚರಂಡಿಯ ಮೂಲಕ ಬಂದ ಮೊಸಳೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು.ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಕೂಡ ನೀಡಿದ್ದರು.ದಾಂಡೇಲಿಯ ಮೊಸಳೆ ಪಾರ್ಕ್​ನಿಂದ ಅದು ಗ್ರಾಮಕ್ಕೆ ಬಂದಿದ್ದು, ಎರಡು ತಿಂಗಳ ಹಿಂದೆ ಕೂಡ ಇದೇ ರೀತಿ ಊರಿನ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿ ಆತಂಕ ಸೃಷ್ಟಿಸಿತ್ತು.

ಇದೀಗ ಪದೇ ಪದೇ ಮೊಸಳೆ ಪಾರ್ಕ್ ಬಿಟ್ಟು ಗ್ರಾಮಕ್ಕೆ ನುಗ್ಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.ಅಲ್ಲದೆ ಇದನ್ನು ನೋಡುವುದಕ್ಕಾಗಿ ಜನ ಮುಗಿ ಬಿದ್ದಿದ್ದರು.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದ್ದು,ಮೊಸಳೆ ರಕ್ಷಣೆ ಕಾರ್ಯಾಚರಣೆ ನಡೆಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button