ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
Wife Murder: ಹುಬ್ಬಳ್ಳಿಯಲ್ಲಿ ಗಂಡನಿಂದ ಹೆಂಡತಿಯ ಕೊಲೆ

ಧಾರವಾಡ : ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ. ಮಂಜುಳಾ ಗಂಜಿಗಟ್ಟಿ (30)ಕೊಲೆಯಾದ ಮಹಿಳೆಯಾಗಿದ್ದಾಳೆ.
ಇನ್ನೂ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕರಿಬಸಪ್ಪ ಎಂಬ ಯುವಕನ ಜೊತೆ ವಿವಾಹವಾಗಿತ್ತು. ಮದುವೆ ವೇಳೆ ಸಾಕಷ್ಟು ವರೋಪಚಾರ ಕೂಡ ನೀಡಲಾಗಿತಂತೆ. ಆದ್ರೆ ಪತಿ ಕರಿಬಸಪ್ಪ ಹಾಗೂ ಕುಟುಂಬದವರು ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇಂದು ವರದಕ್ಷಿಣೆ ತರಲು ಸಾಧ್ಯವಿಲ್ಲ ಎಂದು ಮಂಜುಳಾ ವಾದಿಸಿದಕ್ಕೆ ಕರಿಬಸಪ್ಪ ಹಾಗೂ ಅವರ ಕುಟುಂಬದವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




