ಜಿಲ್ಲಾ ಸುದ್ದಿಮೈಸೂರು

ಗಂಡಕ ಕಿರುಕುಳ ತಾಳಲಾರದೆ ಪತಿಯನ್ನು ಕೊಲೆಗೈದ ಪತ್ನಿ

ಮೈಸೂರು ; ಮದ್ಯಸೇವಿಸಿ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ನೀಡುತ್ತಿದ್ದನ್ನ ತಾಳಲಾರದೇ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಈ‌ ಘಟನೆ ನಡೆದಿದ್ದು, ಕುಡುಕ ಗಂಡನ ಕಾಟ ತಾಳಲಾರದೇ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ. ಬಸವರಾಜಪ್ಪ (42) ಎಂಬುವನನ್ನು ಈತನ ಪತ್ನಿ ನೇತ್ರಾ ಕೊಲೆ ಮಾಡಿದ್ದಾಳೆ.

ಈತ ಪ್ರತಿ ದಿನ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದ. ನಿನ್ನೆ ರಾತ್ರಿಯೂ ಮದ್ಯಪಾನ ಮಾಡಿ ಹೆಂಡತಿ ನೇತ್ರಾಳೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ.

ಗಂಡನಿಂದ ರಕ್ಷಿಸಿಕೊಳ್ಳಲು ಆತನ ಕುತ್ತಿಗೆ ಹಿಡಿದು ನೆಲಕ್ಕೆ ಕೆಡವಿದಾಗ ಕುಡಿದ ಮತ್ತಿನಲ್ಲಿದ್ದ ಬಸವರಾಜಪ್ಪ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.‌ ಘಟನೆ ಸಂಭಂದ ಸರಗೂರು ಪೊಲೀಸರು ಆತನ ಪತ್ನಿ ನೇತ್ರಾಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button