ಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿಯಲ್ಲಿ‌ ಮತ್ತೊಂದು ಕೊಲೆ: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ

ಕಲಬುರಗಿ: ಲ್ಯಾಬ್ ಟೆಕ್ನಿಷಿಯನ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ‌ ಕಗ್ಗೊಲೆ ಮಾಡಿರುವ ಘಟನೆ‌ ಕಲಬುರ್ಗಿಯ ಕನಕ ನಗರದಲ್ಲಿ ನಡೆದಿದೆ.

ಅಪ್ಪಾ ಸಾಹೇಬ್ (32) ಕೊಲೆಯಾದ ವ್ಯಕ್ತಿ, ಸಂಗಮನಾಥ ಕಾಲೋನಿ ನಿವಾಸಿಯಾಗಿದ್ದ ಅಪ್ಪಾಸಾಹೇಬ್ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ರಾತ್ರಿ ಬೈಕ್ ಮೇಲೆ ಕನಕ ನಗರದ ಖಾಸಗಿ ಶಾಲೆಯ ಪಕ್ಕದಲ್ಲಿ ಹೋಗುವಾಗ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಕೊಲೆಗೆ ಕಾರಣ ಇನ್ನೂ ತಿಳಿದಯಬಂದಿಲ್ಲ, ಈ ಕುರಿತು ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ‌ ಪೊಲೀಸರು ಬಲೆ ಬಿಸಿದ್ದಾರೆ. ಕಳೆದ ಒಂದು ತಿಂಗಳ ಅಂತರದಲ್ಲಿ ಎಂಟು ಕೊಲೆಗಳು ನಡೆದಿದ್ದು, ಜ‌ನ ಭಯ ಭೀತರಾಗಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button