ಕಲಬುರ್ಗಿಜಿಲ್ಲಾ ಸುದ್ದಿ

ಮೊಮ್ಮಗನ ತೊಟ್ಟಿಲಕ್ಕೆ ಬಂದು ಮಸಣ ಸೇರಿದ: ಮಡದಿಯೇ ಮಾಡಿದ್ಳಾ ಕೊಲೆ..?

ಕಲಬುರಗಿ: ಅವ್ರಿಬ್ಬರದ್ದು ಮದುವೆ ಆಗಿ ಮೊಮ್ಮಕ್ಕಳನ್ನ ಕೂಡ ಕಂಡಿದ್ದಾರೆ. ಆದ್ರು ಕೂಡ ಆತನಿಗೆ ಹೆಂಡತಿ ಮೇಲೆ ಇನ್ನಿಲ್ಲದ ಅನುಮಾನ. ಆಕೆ ಕೂತ್ರು ನಿಂತ್ರು ಕೂಡ ಆಕೆಯ ಶೀಲವನ್ನ ಶಂಕಿಸಿ ಆಕೆಯ ಜೊತೆ ಗಲಾಟೆ ತೆಗೆತಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ಗಂಡ ಹೆಂಡತಿಯ ಮಧ್ಯೆ ಇದೆ ವಿಚಾರಕ್ಕೆ ಗಲಾಟೆ ಆಗ್ತಿತ್ತು. ಮೊನ್ನೆ ಕೂಡ ಮಗಳ ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಾಗಲು ಕೂಡ ಹೆಂಡತಿಯ ಶೀಲ ಶಂಕಿಸಿ ಗಲಾಟೆ ತೆಗೆದಿದ್ದ. ಗಂಡನ ಕಾಟಕ್ಕೆ ಬೆಸತ್ತ ಹೆಂಡತಿ ಗಂಡನನ್ನೆ ಕೊಲೆ ಮಾಡಿದ್ದಾಳೆ‌.‌‌

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮದ ಹೊರವಲಯದ ಗಣಿ ಪ್ರದೇಶದಲ್ಲಿ ವ್ಯಕ್ತಿಯ ಕೊಲೆ ನಡೆದಿದೆ. ವ್ಯೆಕ್ತಿಯ ಹೆಸರು ಭದ್ರು ರಾಠೋಡ್, ಈತ ಪಕ್ಕದ ತೆಲಂಗಾಣ ರಾಜ್ಯದ ವಿಕರಬಾದ್ ಜಿಲ್ಲೆಯ ಬಾವಿಮಡಿ ತಾಂಡದ ನಿವಾಸಿಯಾಗಿದ್ದು, ಮಗಳ ಮಗನ (ಮೊಮ್ಮಗನ) ತೊಟ್ಟಿಲು ಕಾರ್ಯಕ್ರಮದ ಸಲುವಾಗಿ ಕುಟುಂಬದ ಸಮೇತವಾಗಿ ಕಳೆದ ಮೂರು ನಾಲ್ಕು ದಿನದ ಹಿಂದೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋತಕಪಳ್ಳಿ ಗ್ರಾಮಕ್ಕೆ ಬಂದಿದ್ದ. ತೊಟ್ಟಿಲು ಕಾರ್ಯಕ್ರಮ ಮುಗಿದ ಬಳಿಕ ನಾಪತ್ತೆಯಾಗಿದ್ದ ಭದ್ರು ರಾಠೋಡ್ ಮಿರಿಯಾಣ ಗ್ರಾಮದ ಹೊರವಲಯದಲ್ಲಿ ಗಣಿ ಪ್ರದೇಶದಲ್ಲಿ ಬರ್ಬರವಾಗಿ ಕೊಲೆ ಮಾಡಿ ಬಿಸಾಕಿದ್ದಾರೆ.

ಭದ್ರು ರಾಠೊಡ್ ಕೊಲೆಗೆ ಆತನ ಪತ್ನಿ ಸುಶೀಲಾಬಾಯಿ ಕೈವಾಡ ಇದೆ ಅಂತಾ ಖುದ್ದು ಭದ್ರು ರಾಠೋಡ್ ಮತ್ತು ಸುಶೀಲಾಬಾಯಿ ಪುತ್ರ ಮಿಥುನ್ ದೂರು ದಾಖಲಿಸಿದ್ದಾನೆ. ಭದ್ರು ರಾಠೋಡ್ ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರತಿನಿತ್ಯ ಕುಡಿದು ಬಂದು ಹೆಂಡತಿಯನ್ನ ಹೊಡೆದು ಬಡೆದು ಗಲಾಟೆ ಮಾಡ್ತಿದ್ದನಂತೆ. ಅಷ್ಟೆ ಅಲ್ಲದೆ ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಮನೆಯಲ್ಲಿದ್ರು ಕೂಡ ಹೆಂಡತಿಯ ಶೀಲದ ಮೇಲೆ ಶಂಕೆ ಮಾಡಿ ಜಗಳ ತೆಗೆದು ಹಲ್ಲೆ ಮಾಡ್ತಿದ್ದನಂತೆ. ಅದ್ರಂತೆ ಮೊಮ್ಮಗನ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಾಗಲು ಕೂಡ ಹೆಂಡತಿಯ ಜೊತೆ ಗಲಾಟೆ ತೆಗೆದು ಜಗಳ ಮಾಡಿದ್ದನಂತೆ. ಇದ್ರಿಂದ ಬೆಸತ್ತ ಸುಶೀಲಾಬಾಯಿ ಮತ್ತು ಆತ ಅಳಿಯ ಪ್ಲ್ಯಾನ್ ಮಾಡಿ ಭದ್ರನನ್ನ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಮಿರಿಯಾಣ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭದ್ರು ಪತ್ನಿ ಸುಶೀಲಾಬಾಯಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸೊದಕ್ಕೆ ಮುಂದಾಗಿದ್ದಾರೆ. ಭದ್ರು ರಾಠೋಡ್ ಕೊಲೆಯ ಹಿಂದೆ ಪತ್ನಿ ಒಬ್ಬಳದ್ದೆ ಕೈವಾಡ ಇದೆಯಾ ಅಥವಾ ಮತ್ತಿನ್ಯಾರು ಭಾಗಿಯಾಗಿದ್ದಾರೆ ಅನ್ನೋದ್ರ ಜೊತಗೆ ಕೊಲೆಗೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆಯು ಕೂಡ ಪೊಲೀಸರು ತನಿಖೆ ನಡೆಸೊದಕ್ಕೆ ಮುಂದಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button