ಜಿಲ್ಲಾ ಸುದ್ದಿದಾವಣಗೆರೆ
ದಾವಣಗೆರೆ: ಬೈಕ್ ನಲ್ಲಿ ರಸ್ತೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ…!

ದಾವಣಗೆರೆ: ಬೈಕ್ ನಲ್ಲಿ ರಸ್ತೆ ದಾಟುವಾಗ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಬಳಿ ನಡೆದಿದೆ.
ಕೊಚ್ಚಿ ಹೋಗಿರುವ ವ್ಯಕ್ತಿಯನ್ನು ಹೊನ್ನಾಳಿ ತಾಲೂಕು ಕುಳಗಟ್ಟೆ ಗ್ರಾಮದ ಶಿವರಾಜ್ (26) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಚನ್ನಗಿರಿಯ ತಾಲೂಕಿನ ನಲ್ಕುದುರೆ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದ ಮನೆಗೆ ವಾಪಸ್ ಬರುತ್ತಿದ್ದ. ಶಾಂತಿಸಾಗರ ಕೆರೆಗೆ ಕೋಡಿ ಬಿದ್ದ ಪರಿಣಾಮ ಹರಿದ್ರಾವತಿ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತಿತ್ತು. ಇದರಿಂದ ಚಿರಡೋಣಿ-ದೊಡ್ಡಘಟ್ಟ ಗ್ರಾಮದ ಮಧ್ಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಹರಿಯುವ ನೀರಲ್ಲಿ ಬೈಕ್ ಮೇಲೆ ರಸ್ತೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಕೊಚ್ಚಿ ಹೋದ ಶಿವರಾಜ್ ಗೆ ಪೊಲೀಸ್, ಅಗ್ನಿಶಾಮಕ ದಳದಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ




