ಚಿಕ್ಕಮಗಳೂರು
ಒಂದೇ ಬಾರಿ ಎರಡು ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ

ಮಂಗಳೂರು: ಸುಳ್ಯ ತಾಲೂಕಿನ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ವ್ಯಾಕ್ಸಿನ್ ಪಡೆಯಲು ಹೋಗಿದ್ದ ಯುವಕನೋರ್ವನಿಗೆ ಆರೋಗ್ಯ ಸಿಬ್ಬಂದಿಯೊಬ್ಬರು ಎರಡು ಡೋಸ್ ಲಸಿಕೆ ನೀಡಿರುವ ಘಟನೆ ನಡೆದಿದೆ.
ಕೂಟೇಲು ಸಿಆರ್ ಸಿ ಬಾಲಸುಬ್ರಹ್ಮಣ್ಯಂ ಎಂಬವರ ಪುತ್ರ ಕೆ ಬಿ ಅರುಣ್ ಮೊದಲ ಡೋಸ್ ಪಡೆಯಲು ಹೋಗಿದ್ದಾಗ ಆರೋಗ್ಯ ಸಿಬ್ಬಂದಿ ಎರಡು ಡೋಸ್ ಲಸಿಕೆ ನೀಡಿದ್ದಾರೆ. ಒಂದು ಡೋಸ್ ತೆಗೆದುಕೊಂಡು ಕೆಲಕಾಲ ಅಲ್ಲೇ ಕುಳಿತಿದ್ದಾಗ ಆರೋಗ್ಯ ಸಿಬ್ಬಂದಿ ಮತ್ತೊಮ್ಮೆ ಲಸಿಕೆ ಚುಚ್ಚಿದ್ದಾರೆ ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಪಾಲಕರು ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಅವರನನು ಸಂಪರ್ಕಿಸಿದಾಗ ಅವರು, ಆತಂಕ ಪಡಬೇಡಿ ಎಂದು ಸರಿಯಾಗಿ ಆಹಾರ ಸೇವನೆ ಮಾಡುವಂತೆ ಸೂಚಿಸಿ, ಸಮಾಧಾನಿಸಿ ಕಳುಹಿಸಿದ್ದಾರೆ.




