ಚಿಕ್ಕಮಗಳೂರು
ಫಲ್ಗುಣಿಯ ಪದ್ಮಾವತಿ ದೇಗುಲದಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಮೂಡಿಗೆರೆಗೆ ಸಮೀಪದ ಫಲ್ಗುಣಿಯ ಭೂದೇವಿ ಮಾತೆ ಪದ್ಮಾವತಿ ದೇವಿ ದೇಗುಲದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಕಳೆದ ಒಂದು ವಾರದಿಂದ ದೂರದ ಭಕ್ತರು,ಗ್ರಾಮಸ್ಥರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದೆ.
ಬಂದ ಭಕ್ತರಿಗೆ ಅನ್ನದಾನ ಹಾಗು ಲಘು ಉಪಹಾರ ಕಾರ್ಯಕ್ರಮವೂ ಭಕ್ತರಿಂದ ನಡೆಯುತ್ತಿದೆ.
ರಾಜ್ಯದ ವಿವಿದ ಭಾಗಗಳಿಂದ ಮಾತೆಯ ಭಕ್ತಸಮೂಹ ಇಲ್ಲಿಗೆ ಬಂದು ಮಾತೆಯ ಆಶೀರ್ವಾದ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥ ಮಹೇಂದ್ರ ಕುಮಾರ್ ಫಲ್ಗುಣಿ ತಿಳಿಸಿದ್ದಾರೆ.




