ಚಿಕ್ಕಮಗಳೂರು
ಡಿಸಿ ಕಚೇರಿ ಎದುರು ಬೋಜೇಗೌಡ ಏಕಾಂಗಿ ಹೋರಾಟ

ಚಿಕ್ಕಮಗಳೂಉರ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸುವ ಪ್ರಮುಖ ಸಭೆಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲವೆಂದು ಆರೋಪಿಸಿ ಎಂಎಲ್ಸಿ ಎಸ್.ಎಲ್.ಬೋಜೇಗೌಡ ಡಿಸಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ನಡೆಸುವ ಅನೇಕ ಪ್ರಗತಿ ಪರಿಶೀಲನಾ ಸಭೆಗಳಿಗೆ ನನ್ನನ್ನು ಕರೆದಿಲ್ಲ. ಬೇಕಾಬಿಟ್ಟಿ ಸಭೆ ನಡೆಯುತ್ತಿದ್ದು, ಸಭೆಗಳು ಕೇವಲ ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರವಾ ಎಂದು ಕಿಡಿ ಕಾರಿದರು.
ನೀವು ಬೋಜೇಗೌಡರಿಗೆ ಬೆಲೆ ಕೊಡಬೇಡಿ. ಹುದ್ದೆಗೆ ಗೌರವ ಕೊಡಿ. ನೀವು ಮಾಡುವ ತಪ್ಪುಗಳನ್ನು ಎತ್ತಿ ಹಿಡಿಯುತ್ತೇನೆಂದು ಸಭೆಗೆ ಕರೆಯಲು ಭಯಪಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ರಮೇಶ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಆಗಮಿಸಿ, ಮನವೊಲಿಸಲು ಪ್ರಯತ್ನಿಸಿದಾಗ ಅವರನ್ನು ಬೋಜೇಗೌಡ ತೀವ್ರ ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡುಬಂದಿತು.




