ಚಿಕ್ಕಮಗಳೂರು

ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ನಲ್ಲಿ ಕೇಜ್ರಿವಾಲ್ ನಿಸ್ಸೀಮರು

ಚಿಕ್ಕಮಗಳೂರು : ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ಕೇಜ್ರಿವಾಲ್ ಗಿಂತ ಚೆನ್ನಾಗಿ ಯಾರೂ ಮಾಡಲಾರರು. ಯೋಗೀಂದ್ರ ಯಾದವ್, ಪ್ರಶಾಂತ್ ಭೂಷಣ್, ಕುಮಾರ್ ಅವರೆಲ್ಲಾ ಯೂಸ್ ಅಂಡ್ ಥ್ರೋನಾ… ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ವಾಗ್ದಾಳಿ ನಡೆಸಿದ್ದಾರೆ.

ಮನೋಹರ್ ಪರಿಕ್ಕರ್ ಬದುಕಿದ್ದಾಗ ಆಮ್ ಆದ್ಮಿ ಪಾರ್ಟಿಯವರು ಅಪಮಾನ ಮಾಡಿದರು. ಯೋಗೀಂದ್ರ ಯಾದವ್, ಪ್ರಶಾಂತ್ ಭೂಷಣ್, ಕುಮಾರ್ ವಿಶ್ವಾಸ್ ನೋಡಿದಾಗ ಕೇಜ್ರಿವಾಲ್ಗೆ ಆ ಪದದ ಅರ್ಥ ಗೊತ್ತಾಗಿದೆ. ಅವರಿಗೆ ಅಧಿಕಾರ ಇಲ್ಲದಾಗ ಯಾರಿದ್ದರು, ಈಗ ಯಾರಿದ್ದಾರೆ ಅದನ್ನು ನೋಡಿದಾಗ ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ತಿಳಿಯುತ್ತದೆ.

ಪರಿಕ್ಕರ್ ನಾವು ಎಲ್ಲಾ ಗೌರವ ನೀಡಿದ್ದೇವೆ, ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದಾರೆ. ಗೋವಾ ಬಿಜೆಪಿ ಬೆಳವಣಿಗೆಯಲ್ಲಿ ಪರಿಕ್ಕರ್ ಪಾತ್ರ ಬಹಳ ದೊಡ್ಡದಿದೆ. ಅವರನ್ನು ಎತ್ತರದ ಸ್ಥಾನದಲ್ಲೇ ಇಡುತ್ತೇವೆ. ಅವರ ಮಗ ನಮ್ಮ ಕಾರ್ಯಕರ್ತ, ನಾವು ಅವರನ್ನ ಸಂಬಾಳಿಸುತ್ತೇವೆ. ನಮಗೆ ಗೊತ್ತಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button