ಚಿಕ್ಕಮಗಳೂರುಜಿಲ್ಲಾ ಸುದ್ದಿ

ಪರೀಕ್ಷೆಗೆ ಹಾಜರಾಗದೇ ಹೊರಬಂದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು

ಚಿಕ್ಕಮಗಳೂರು: ಹಿಜಾಬ್ ಧರಿಸಲು ಅನುಮತಿ ನೀಡದ ಕಾರಣ ಪರೀಕ್ಷೆಗೆ ತೆರಳದೆ ವಿದ್ಯಾರ್ಥಿನಿಯರು ಹೊರಬಂದ ಘಟನೆ ಚಿಕ್ಕಮಗಳೂರಿನ ಇಂದಾವರ ಶಾಲೆಯಲ್ಲಿ ನಡೆದಿದೆ.

ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸಮವಸ್ತ್ರದ ವೇಲ್ ಅನ್ನು ತಲೆಗೆ ಧರಿಸಿ ಶಾಲೆಗೆ ತೆರಳಿದ್ದರು. ಆದರೆ ಇದಕ್ಕೆ ಶಿಕ್ಷಕರು ಅನುಮತಿ ನೀಡಿಲ್ಲ. ಹೀಗಾಗಿ ಕೆಲಕಾಲ ಪೋಷಕರು ಹಾಗೂ ಶಿಕ್ಷಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪರೀಕ್ಷೆ ಬರೆಯದೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಬಂದಿದ್ದಾರೆ.

ಶಾಲೆಯಲ್ಲಿ ಹಿಂದಿ ಭಾಷಾ ಪರೀಕ್ಷೆಯಿತ್ತು. ಹಿಜಾಬ್ ಧರಿಸಿದವರನ್ನು ಶಾಲೆಗೆ ಬರಲು ಶಿಕ್ಷಕರು ಅನುಮತಿ ನೀಡಿಲ್ಲ. ನಾವು ಬೇರೆಯ ಹಿಜಾಬ್ ಧರಿಸಿಲ್ಲ. ಶಾಲಾ ಸಮವಸ್ತ್ರದ ವೇಲ್ ಅನ್ನು ತಲೆಗೆ ಹಾಕಿಕೊಂಡಿದ್ದೇವೆ. ಈ ರೀತಿ ಮಾಡುವುದು ಎಷ್ಟು ಸರಿ ಎಂದು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ.

ಅನೇಕ ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದೇವೆ. ಈಗ ಏಕಾಏಕಿ ಹೊಸ ನಿಯಮಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಗರಂ ಆಗಿದ್ದಾರೆ. ಸ್ಥಳಕ್ಕಾಗಮಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮನವೊಲಿಸಲು ಪ್ರಯತ್ನಿ ಮಾಡಿ ವಿಫಲವಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button