ಚಿಕ್ಕಮಗಳೂರು

ಕಾರ್ಮಿಕರ ಆಹಾರ ಕಿಟ್ ರಾಜಕೀಯ; ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ

ಚಿಕ್ಕಮಗಳೂರು: ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ಕೊಡುವ ಆಹಾರದ ಕಿಟ್ ವಿಚಾರದಲ್ಲಿ ನಡೆದಿರುವ ರಾಜಕೀಯ ವಾಗ್ವಾದವು ಮುಂದುವರಿದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಕೊಪ್ಪ ತಾಲೂಕಿನ ಜಯಪುರದಲ್ಲಿ ಆಹಾರದ ಕಿಟ್ ಪಡೆಯಲು ಕಾರ್ಮಿಕರ ಗುಂಪು ಸೇರಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಕುರಿತು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಎದುರಲ್ಲೇ ಬಿಜೆಪಿ ಕಾರ್ಯಕರ್ತರು ಚಕಾರ ಎತ್ತಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಜಗಳ ತಾರಕಕ್ಕೇರಿತು.

ಸರ್ಕಾರದ ಕಾರ್ಯಕ್ರಮ ಸೊಸೈಟಿಯಲ್ಲಿ ಆಯೋಜಿಸಿದ್ದಕ್ಕೆ ಬಿಜೆಪಿ ಮುಖಂಡರು ಏರುಧ್ವನಿ ಎತ್ತಿದಾಗ ಎರಡೂ ಪಕ್ಷದ ಮುಖಂಡರು ಪರಸ್ಪರ ವಾಗ್ವಾದ ನಡೆಸಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಶಾಸಕ ರಾಜೇಗೌಡ ಏನೂ ಮಾತಾಡದೆ, ಸುಮ್ಮನೆ ನೋಡುತ್ತ ನಿಲ್ಲಬೇಕಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ, ಗದ್ದಲ ತಣಿಸಲು ಹರಸಾಹಸಪಟ್ಟರು

Spread the love

Related Articles

Leave a Reply

Your email address will not be published. Required fields are marked *

Back to top button