ಚಿಕ್ಕಮಗಳೂರು

ಜನಶಕ್ತಿ ನಡಿಗೆ ಹಳ್ಳಿ ಕಡೆಗೆ ಸೈಕಲ್ ಜಾಥಾ

ಚಿಕ್ಕಮಗಳೂರು: ಮಲೆನಾಡಿನ ಗಂಭೀರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಜನಶಕ್ತಿ ಹಾಗೂ ಇತರೆ ಸಂಘಟನೆಗಳ ಆಶ್ರಯದಲ್ಲಿ ಎರಡು ದಿನಗಳ ಸೈಕಲ್ ಜಾಥಾ ಆಯೋಜಿಸಲಾಗಿದೆ.

ಜನಶಕ್ತಿಯ ನಡಿಗೆ ಹಳ್ಳಿಯ ಕಡೆಗೆ ಘೋಷಣೆಯಡಿ ಸೈಕಲ್ ಜಾಥಾಕ್ಕೆ ಮುಖಂಡ ಕೆ ಎಲ್ ಅಶೋಕ್ ಜಯಪುರ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಿದರು.

ಅಕಾಲಿಕ ಮಳೆಯಿಂದ ಮಲೆನಾಡಿನಲ್ಲಿ ರೈತರ ಪ್ರಮುಖ ಬೆಳೆಗಳೆಲ್ಲವೂ ನೆಲಕ್ಕಚ್ಚುತ್ತಿದೆ. ಸೂಕ್ತ ಮಾರುಕಟ್ಟೆ, ಬೆಂಬಲ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸೂರಿಲ್ಲದವರಿಗೆ ಸೂರು, ನಿವೇಶನ ನೀಡುವಲ್ಲಿ ವಿಳಂಬವಾಗುತ್ತಿದೆ ಅಕ್ರಮ ಸಕ್ರಮ ಮಂಜೂರಾತಿಯಲ್ಲಿ ಬಲಾಢ್ಯರು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡು ಭಾಗದಲ್ಲಿ ಜ್ವಲಂತ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಜನಜಾಗೃತಿ ಮೂಡಿಸುವ ಕರಪತ್ರಗಳನ್ನು ಸೈಕಲ್ ಜಾಥಾ ಮೂಲಕ ಸಂಘಟನೆಯಿಂದ ಹಂಚಿದರು.

ಕರ್ನಾಟಕ ಜನಶಕ್ತಿ, ರೈತಸಂಘ ಹಾಗೂ ಇತರೆ ಸಂಘಟನೆಗಳು ಪಾಳ್ಗೊಂಡಿದ್ದವು. ಹಾಗಲಗಂಚಿ ವೆಂಟಕೇಶ್, ಕೌಳಿ ರಾಮು, ಮಾಲತೇಶ್, ಮರಿಯಪ್ಪ ಗುರುಮೂರ್ತಿ, ಆನಂದ್, ಸರೋಜ, ಸುರೇಶ್ ಮತ್ತಿತರರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button