ಚಿಕ್ಕಮಗಳೂರು
ಶೃಂಗೇರಿಯ 10 ಪಿಡಿಒಗಳ ವರ್ಗಾವಣೆ

ಚಿಕ್ಕಮಗಳೂರು: ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಬರುವ 10 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮೊದಲ ಹಂತದ ವರ್ಗಾವಣೆಯಲ್ಲಿ ರಾಜ್ಯದಲ್ಲಿ 25 ಪಿಡಿಒಗಳು ವರ್ಗಾವಣೆಯಾಗಿದ್ದು, ಅದರಲ್ಲಿ 10 ಮಂದಿ ಶೃಂಗೇರಿ ವ್ಯಾಪ್ತಿಯವರು. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ನಡೆಯುತ್ತಿದೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಪಿಡಿಒಗಳು ವರ್ಗಾವಣೆ ಆಗುವ ಸಾಧ್ಯತೆಯಿದೆ.




