ಜೋಶಿ ಕುಟುಂಬದ ಮದುವೆ ಸಮಾರಂಭದಲ್ಲಿ ಕೇಂದ್ರ, ರಾಜ್ಯ ನಾಯಕರು ಭಾಗಿ: ನವದಂಪತಿಗಳಿಗೆ ಶುಭಕೋರಿದ ಗಣ್ಯರು

ಧಾರವಾಡ: ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದ ಮದುವೆ ಸಮಾರಂಭದಲ್ಲಿ ಇಂದು ಕೇಂದ್ರ ಸಚಿವರು ಸೇರಿದಂತೆ ರಾಜ್ಯ ನಾಯಕರು ಹಾಗೂ ಮಠಾಧೀಶರು ಭಾಗಿಯಾಗಿ ನವದಂಪತಿಗಳಿಗೆ ಆಶೀರ್ವಾದ ಮಾಡಿದರು.
ದಾವಣಗೇರಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಅವರು ನೇರವಾಗಿ ಬಿಗಿ ಭದ್ರತೆಯಲ್ಲಿ ನಗರದ ಖಾಸಗಿ ಹೋಟೆಲ್ ಆಗಮಿಸಿದರು. ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲ ಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ್ ಅರಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗಳಿಗೆ ಆರ್ಶೀವಾದ ಮಾಡಿ, ಶುಭ ಕೋರಿದ್ದರು.
ಇದನ್ನೂ ಓದಿ : ಹಸೆ ಮಣಿ ಏರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ: ನವ ದಂಪತಿಗೆ ಶುಭ ಕೋರಿದ ಗಣ್ಯರು
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯಪಾಲರಾದ ಥಾವರ ಚಂದ್ ಗಹ್ಲೋಟ್ ಅವರು ಕಾರ್ಯಕ್ರಮದ ಬಳಿಕ, ಹುಬ್ಬಳ್ಳಿಗೆ ಆಗಮಿಸಿ ನೇರವಾಗಿ ಕೇಂದ್ರ ಸಚಿವ ಜೋಶಿ ಕುಟುಂಬದ ಅರಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅರ್ಪಿತಾ-ಹೃಷಿಕೇಶ್ ನವದಂಪತಿಗಳಿಗೆ ಆರ್ಶೀವಾದ ಮಾಡಿದರು.
ಇದನ್ನೂ ಓದಿ : ಮಗಳ ಮದುವೆ ಸಮಾರಂಭದಲ್ಲಿ ಪತ್ನಿಯ ಜೊತೆಗೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಇನ್ನೂ ಪ್ರಹ್ಲಾದ್ ಜೋಶಿಯವರ ಮೊದಲ ಪುತ್ರಿ ಅರ್ಪಿತಾ ಹೃಷಿಕೇಶ್ ಅರಕ್ಷತೆ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠದ ಪೂಜ್ಯ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮೀಜಿಗಳು ಹಾಗೂ ಕೇಂದ್ರ ನಾಯಕರು ಸೇರಿದಂತೆ ರಾಜ್ಯ ನಾಯಕರು ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.



