ಕೊಡಗುಜಿಲ್ಲಾ ಸುದ್ದಿ
ಸಿಮೆಂಟ್ ಲಾರಿ ಪಲ್ಟಿ – ಚಾಲಕ ಮತ್ತು ನಿರ್ವಾಹಕ ಪ್ರಾಣಾಪಯದಿಂದ ಪಾರು

ಕೊಡಗು : ಸೊಮವಾರಪೇಟೆ ತಾಲೂಕಿನ ಶನಿವಾರಸಂತೆಯ ಗುಡುಗಳಲೆ ತಿರುವಿನಲ್ಲಿ ಆಂಧ್ರ ಪ್ರದೇಶದಿಂದ ಸೊಮವಾರಪೇಟೆಗೆ ಸಿಮೆಂಟ್ ತುಂಬಿಸಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪಲ್ಟಿಯಾದ ಘಟನೆ ನಡೆದಿದೆ.
ಆಂಧ್ರ ಪ್ರದೇಶ ಮೂಲದ ಇಮ್ತಾಸ್ ಸಿಮೆಂಟ್ ತುಂಬಿದ ಲಾರಿಯ ಚಾಲನೆ ಮಾಡುತ್ತಿದ್ದರು. ಲಾರಿ ಪಲ್ಟಿಯಾದ ಲಾರಿಯ ಎಲ್ಲ ಚಕ್ರಗಳು ನೆಲ ಬಿಟ್ಟು ಆಕಾಶದ ಕಡೆಗೆ ಮುಖ ಮಾಡಿದೆ.
ಈ ಅಪಘಾತದಲ್ಲಿ ಸಿನಿಮಿಯ ರೀತಿಯಲ್ಲಿ ಚಾಲಕ ಹಾಗೂ ಕ್ಲೀನರ್ ಅಪಘಾತದಿಂದ ಪಾರಾಗಿ ಲಾರಿಯಿಂದ ಹೊರ ಬಂದಿದ್ದಾರೆ. ಸುಮಾರು 600 ಸಿಮೆಂಟ್ ಚಿಲಗಳನ್ನು ಹೊತ್ತು ಬರುತ್ತಿದ್ದ ಲಾರಿ, ಅರಕಲಗೂಡು ಮಾರ್ಗದಿಂದ ಬರುವಾಗ ಅಪಘಾತ ಸಂಬವಿಸಿದೆ.
ಈ ರಸ್ತೆಯಲ್ಲಿ ಆಗಿಂದಾಗ್ಗೆ ಈ ರೀತಿಯ ಅವಘಡ ಸಂಭವಿಸುತ್ತಿದ್ದರೂ ಕೂಡ, ಸಂಬಂಧಪಟ್ಟವರು ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.




