ಉತ್ತರ ಕನ್ನಡಜಿಲ್ಲಾ ಸುದ್ದಿ

ಉತ್ತರ ಕನ್ನಡ: ಅಂತ್ಯಕ್ರಿಯೆಗೆ ಹೊರಟ ದಂಪತಿಗಳ ಕಾರು ಪಲ್ಟಿ : ಕೆರೆಗೆ ಬಿದ್ದು ಸಾವು

ಕಾರವಾರ : ಸಂಬಂಧಿಕರ ಅಂತ್ಯಕ್ರಿಯೆಗೆ ಹೊರಟಿದ್ದ ದಂಪತಿಗಳ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆರೆಗೆ ಬಿದ್ದು ಸ್ಥಳದಲ್ಲೇ ದಂಪತಿಗಳು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಮ್ಮಾಜಿ ಕೆರೆ ಬಳಿ ಸೋಮವಾರ ನಡೆದಿದೆ.

ಮುಂಡಗೋಡ ತಾಲೂಕಿನ ಅರಶಿಣಗೇರಿಯ ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳು.ಇಂದು ಬೆಳಿಗ್ಗೆ ದಂಪತಿಗಳ ಸಂಬಂಧಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಹೋಗುವ ವೇಳೆ ಕಾರು ನಿಯಂತ್ರಣಕ್ಕೆ ಬಾರದೇ ಪಲ್ಟಿಯಾಗಿ ಕೆರೆಗೆ ಬಿದ್ದು ದುರ್ಘಟನೆ ಜರುಗಿದೆ.

ಘಟನೆ ಸಂಬಂಧ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Spread the love

Related Articles

Leave a Reply

Your email address will not be published. Required fields are marked *

Back to top button