ಜಿಲ್ಲಾ ಸುದ್ದಿದಾವಣಗೆರೆ

ಕಾರು – ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಹೈದರಾಬಾದ್ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಸಾವು

ದಾವಣಗೆರೆ: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಡೆಂಟಲ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಭೀಕರವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ನಗರದ ಎಂ ಸಿಸಿ ಬಿ ಬ್ಲಾಕ್ ನಲ್ಲಿ ಸಂಭವಿಸಿದೆ.

ಬಾಪೂಜಿ ಡೆಂಟಲ್ ಕಾಲೇಜಿನ ಸ್ನಾತಕೋತ್ತರ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಹೈದರಾಬಾದ್ ಮೂಲಕ 25 ವರ್ಷದ ಪ್ರಿಯಾಂಕಾ ಮೃತಪಟ್ಟಿರುವ ದುರ್ದೈವಿ. ಇಂದು ಬೆಳಗ್ಗೆ ಎಂದಿನಂತೆ ಕಾಲೆಜಿಗೆ ತೆರಳುತ್ತಿದ್ದ ಪ್ರಿಯಾಂಕ್ ಎಂಸಿಸಿ ಬಿ ಬ್ಲಾಕ್ ನ 4ನೇ ಕ್ರಾಸ್ ನಲ್ಲಿ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ತಿರುವಿನಲ್ಲಿ ತೆರಳುತ್ತಿದ್ದಾಗ ಬೈಕ್ ಗೆ ಕಾರ್ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಪ್ರಿಯಾಂಕ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಸ್ಥಳದಲ್ಲೇ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಬಳಿಕ ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ತಲೆಗೆ ಬಲವಾದ ಪೆಟ್ಟು ರಕ್ತ ಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಿಸದೇ ಪ್ರಿಯಾಂಕ ಸಾವನ್ನಪ್ಪಿದ್ದಾಳೆ.

ಪ್ರಿಯಾಂಕ ಹೆಲ್ಮೆಟ್ ಹಾಕಿಕೊಂಡಿದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿತ್ತು ಆದರೆ, ಹೆಲ್ಮೆಟ್ ಇದ್ದರೂ ತಲೆಗೆ ಧರಿಸದೇ ನಿರ್ಲಕ್ಷ್ಯ ವಹಿಸಿದ್ದು, ಸಾವಿಗೆ ಕಾರಣ ಎನ್ನಲಾಗುತ್ತಿದೆ. ದಾವಣಗೆರೆ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button