ಉತ್ತರ ಕನ್ನಡಜಿಲ್ಲಾ ಸುದ್ದಿ

ಭಟ್ಕಳ : ಕ್ಯಾಪ್ಟನ್ ಕೆ ಆರ್ ನಾಯ್ಕ ನಿಧನ

ಕಾರವಾರ : ಭಟ್ಕಳ ತಾಲೂಕಿನ ಮಾಜಿ ಸೈನಿಕರಾದ ಕ್ಯಾಪ್ಟನ್ ಕೆ. ಆರ್.ನಾಯ್ಕ ಶನಿವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಇಂಡೋ ಚೀನಾ ಯುದ್ಧದ ತುರ್ತು ಸಂದರ್ಭದಲ್ಲಿ ಸೇನೆಗೆ ಸೇರಿ ಕ್ಯಾಪ್ಟನ್ ಹುದ್ದೆ ಅಲಂಕರಿಸಿದ್ದ ಅವರು 1972 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದರು. 11 ವರ್ಷಗಳ ಹಿಂದೆ ಭಟ್ಕಳದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವಲ್ಲಿ ಕಾರಣೀಕರ್ತರಾಗಿದ್ದರು.

ಉತ್ತರಕನ್ನಡ ಜಿಲ್ಲೆಯ ಸೈನಿಕರ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅವರು ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಭಟ್ಕಳದ ವಿವಿಧ ಸಮಾಜದ ಗಣ್ಯರು ಕಂಬನಿ ಮಿಡಿದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button