ಜಿಲ್ಲಾ ಸುದ್ದಿ
ವಿಜಯೇಂದ್ರ ದೆಹಲಿ ಭೇಟಿ; ಬಿ ವೈ ರಾಘವೆಂದ್ರ ಸ್ಪಷ್ಟನೆ

ಉಡುಪಿ: ವಿಜಯೇಂದ್ರ ದೆಹಲಿಗೆ ಹೋದದ್ದು ವೈಯಕ್ತಿಕ ಕೆಲಸದ ಮೇಲೆ. ದೆಹಲಿ ಪ್ರವಾಸದ ಬಗ್ಗೆ ಎದ್ದಿರುವ ಊಹಾಪೋಹ ಸುಳ್ಳು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಪಕ್ಷದ ಉಪಾಧ್ಯಕ್ಷ ವರಿಷ್ಠರನ್ನು ಭೇಟಿ ಮಾಡುವುದು ಸಹಜ. ಪಕ್ಷ ನಮ್ಮ ತಂದೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ನನ್ನನ್ನು ಎಂಪಿ, ಸಹೋದರ ವಿಜಯೇಂದ್ರ ಉಪಾಧ್ಯಕ್ಷರಾಗಿದ್ದಾರೆ. ಸಂಘಟನೆ ಇಷ್ಟೆಲ್ಲಾ ಅವಕಾಶವನ್ನು ಕೊಟ್ಟದ್ದು ತೃಪ್ತಿಯಿದೆ. ವಿಜಯೇಂದ್ರನನ್ನು ಡಿಸಿಎಂ, ರಾಜ್ಯಾಧ್ಯಕ್ಷ ಮಾಡುತ್ತಾರೆಂಬುದೆಲ್ಲ ತಪ್ಪು ಕಲ್ಪನೆ ಎಂದರು.
ಪಕ್ಷ ಹೇಳಿದರೆ ಹೆಜ್ಜೆ ಹಿಂದೆ ಇಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಯಾರನ್ನು ಗುರುತಿಸಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಈ ಚೌಕಟ್ಟಿನಲ್ಲಿ ಸಿಎಂ ಮಾತನಾಡಿದ್ದಾರೆ. ಸಿಎಂ ಮಾತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ತಿಳಿಸಿದರು.




