ಜಿಲ್ಲಾ ಸುದ್ದಿಬೆಳಗಾವಿ

ಬುಲೆಟ್ ಸವಾರರಿಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸರು: 12 ಬೈಕ್​​ಗಳ ಸೀಜ್

ಬೆಳಗಾವಿ: ಸೂಪರ್ ಸ್ಟೈಲಿಶ್ ಆಗಿ ಬೈಕ್ ಗಳನ್ನ ನವಿಕರಿಸಿಕೊಂಡು ನಗರದಲ್ಲಿ ರೌಂಡ್ಸ್ ಹಾಕುತ್ತಿದ್ದ ಪುಡಾರಿಗಳಿಗೆ ಬೆಳಗಾವಿ ಟ್ರಾಫಿಕ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ದೋಷಪೂರಿತ ಸೈಲೆನ್ಸರ್​​ ಅಳವಡಿಸಿ ಕರ್ಕಶವಾದ ಶಬ್ದ ಹೊರಸುಸಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆಯನ್ನುಂಟು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸದ್ಯ ಸ್ಪೆಷಲ್ ಡ್ರೈವ್ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ

ಇಂದು ಉತ್ತರ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 12 ಸವಾರರ ಮೇಲೆ ಪ್ರಕರಣ ದಾಖಲಿಸಿ ಬೈಕಗಳನ್ನು ಸೀಜ್ ಮಾಡಿ RTO ವಶಕ್ಕೆ ಕೊಟ್ಟಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಸಂಚಾರ ಡಿಸಿಪಿ ಸ್ಪಷ್ಟಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button