ಜಿಲ್ಲಾ ಸುದ್ದಿದಾವಣಗೆರೆ
“ಜೀನಹಳ್ಳಿ ಸಾಹುಕಾರ”ಹೋರಿ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ…?

ದಾವಣಗೆರೆ: ಅದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಫೇಮಸ್. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಎಲ್ಲಾ ಕಡೆಗಳಲ್ಲಿಯೂ ತನ್ನದೇ “ಹವಾ” ಸೃಷ್ಟಿಸಿತ್ತು. ಹಾಗಾಗಿಯೇ ಈ ಹೋರಿಗೆ ಜೀನಹಳ್ಳಿ ಸಾಹುಕಾರ, ಹೊನ್ನಾಳಿ ಕಿರೀಟ ಎಂಬೆಲ್ಲಾ ಹೆಸರಿನಿಟ್ಟು ಸಂಭ್ರಮಿಸಲಾಗುತ್ತೆ.
ಇಂದು ಈ ಹೋರಿಯ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ಈ ಹೋರಿಯ ಮಾಲೀಕ ಅದ್ಧೂರಿಯಾಗಿ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಈ ಹೋರಿಯ ಜನುಮ ದಿನದ ಪ್ರಯುಕ್ತ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿ ಖುಷಿಖುಷಿಯಾಗಿ ಆಚರಣೆ ಮಾಡಲಾಗಿದೆ.
ಶಾಸಕ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಕೇಕ್ ಕತ್ತರಿಸುವ ಮೂಲಕ ಶಾಸಕರು ಹೋರಿಗೆ ಹುಟ್ಟುಹಬ್ಬದ ಶುಭ ಕೋರಿದರು. ಪ್ರತಿವರ್ಷ ಈ ಹೋರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ




