ಜಿಲ್ಲಾ ಸುದ್ದಿ

ರಾಜಾಸ್ತಾನಿ ಸೀರ್ವಿ ಸಮಾಜದಿಂದ ಹಿಂದೂ ರುದ್ರಭೂಮಿಗೆ ಕೊಳವೆಬಾವಿ ಸೌಕರ್ಯ

ಮಡಿಕೇರಿ: ಮಡಿಕೇರಿಯ ಹಿಂದೂ ರುದ್ರಭೂಮಿಗ ಮಡಿಕೇರಿಯ ರಾಜಾಸ್ತಾನ ಸೀರ್ವಿ ಸಮಾಜದ ವತಿಯಿಂದ ಕೊಳವೆಬಾವಿ ವ್ಯವಸ್ಥೆ ಮಾಡಿಕೊಡಲಾಗಿದೆ.

ಕೋವಿಡ್ ನಿಂದ ಮೖತಪಟ್ಟವರ ಅಂತ್ಯಕ್ರಿಯೆಯನ್ನು ಕಳೆದೊಂದು ವರ್ಷದಿಂದ ನಡೆಸಲಾಗುತ್ತಿರುವ ನಗರದ ಹಿಂದೂ ರುದ್ರಭೂಮಿಗೆ ಸೂಕ್ತ ನೀರಿನ ವ್ಯವಸ್ಥೆಯ ಅಗತ್ಯವಿರುವುದನ್ನು ಮನಗಂಡು ಮಡಿಕೇರಿಯ ರಾಜಾಸ್ತಾನ ಸೀರ್ವಿ ಸಮಾಜದವರು ಕೊಳವೆಬಾವಿ ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.

ಅಂತೆಯೇ ರುದ್ರಭೂಮಿಯಲ್ಲಿ ಶೌಚಾಲಯ, ಸ್ನಾನದ ಕೊಠಡಿಗೆ ಅಗತ್ಯವಾದ ಸಾಮಗ್ರಿಗಳನ್ನೂ ಸಮಾಜದ ವತಿಯಿಂದ ನೀಡಲಾಗುತ್ತದೆ. ಸಮಾಜದಿಂದ ಈ ಎಲ್ಲಾ ಕಾಯ೯ಕ್ಕೆ 1.50 ಲಕ್ಷ ರು. ವಿನಿಯೋಗಿಸಲಾಗುತ್ತದೆ ಎಂದು ಸಮಾಜದ ಪ್ರಮುಖರು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button