ಉತ್ತರ ಕನ್ನಡಜಿಲ್ಲಾ ಸುದ್ದಿಶಿವಮೊಗ್ಗ

ರೈಲಿಗೆ ಸಿಲುಕಿ ಶಿರಸಿ ವ್ಯಕ್ತಿ ಸಾವು

ಕಾರವಾರ: ಶಿರಸಿ ಮೂಲದ ವ್ಯಕ್ತಿಯೋರ್ವರು ತಾಳಗುಪ್ಪ – ಬೆಂಗಳೂರು ರೈಲಿಗೆ ಸಿಲುಕಿ ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಸಾಗರ ಪಟ್ಟಣದ ಶಿರವಾಳ ರೈಲ್ವೆ ಗೇಟ್ ನಡುವೆ ನಡೆದಿದೆ.

ಶಿರಸಿ ತಾಲೂಕಿನ ಹುಲೇಕಲ್ ನ ನಿವಾಸಿ ನಾಗರಾಜ್ ಹೆಗಡೆ (31) ಎಂಬವರೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ಸಾಗರದ ಜೆ.ಎಂ.ಎಫ್ ಸಿ ಕೋರ್ಟ್ ನಲ್ಲಿ ಬೆಂಚ್ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ರೈಲಿಗೆ ಸಿಲುಕಿ ದೇಹ ಛಿದ್ರ ಛಿದ್ರಗೊಂಡಿದ್ದು, ಬಹುಶಃ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button