ಉತ್ತರ ಕನ್ನಡಜಿಲ್ಲಾ ಸುದ್ದಿ

ಭಟ್ಕಳ : ಬೊಡೊಕಾನ್ ಕರಾಟೆ ಶಿಕ್ಷಣ ಸಂಸ್ಥೆ ಉದ್ಘಾಟನೆ

ಕಾರವಾರ : ಭಟ್ಕಳ ತಾಲೂಕಿನಲ್ಲಿ ಬೊಡೊಕಾನ್ ಕರಾಟೆ ಶಿಕ್ಷಣ ಸಂಸ್ಥೆಯ ಭಟ್ಕಳ ಘಟಕವನ್ನು ಉದ್ಯಮಿ ಈಶ್ವರ ನಾಯ್ಕ ಉದ್ಘಾಟಿಸಿದರು.

ಆತ್ಮರಕ್ಷಣೆಯ ಕಲೆಯಾದ ಕರಾಟೆ ಶಿಕ್ಷಣವನ್ನು ಬೋಧಿಸುವ ಪ್ರಸಿದ್ದ ಸಂಸ್ಥೆಯಾದ ಬೊಡೊಕಾನ್ ಕರಾಟೆ ಶಿಕ್ಷಣ ಸಂಸ್ಥೆಯ ಭಟ್ಕಳ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕರಾಟೆ ನಮ್ಮ ಮನೋಧೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವಂತರನ್ನಾಗಿಸುತ್ತದೆ. ಅಲ್ಲದೇ ಆತ್ಮರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕರಾಟೆ ಶಿಕ್ಷಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ನಿತ್ಯಾನಂದ ಕೆಮ್ಮಣ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬೊಡೊಕಾನ್ ಕರಾಟೆ ಶಾಲೆ ಭಟ್ಕಳ ಇದರ ಗೌರವಾಧ್ಯಕ್ಷ ಈಶ್ವರ ನಾಯ್ಕ, ರಾಜ್ಯಾಧ್ಯಕ್ಷ ಮಹ್ಮದ್ ನದೀಮ್ ಹಿರಿಯ ಶಿಕ್ಷಕ ದೇವಪ್ಪಾ ನಾಯ್ಕ, ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ನಾಯ್ಕ, ಕೊಣೇಮನೆ, ಮಹಾಪೋಷಕರಾದ ವಸಂತ ಮತ್ತು ಭವಾನಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಬೆಳ್ಮಣ್, ರಾಜ್ಯ ಸಂಘದ ಖಜಾಂಚಿ ರವಿ ಸಾಲಿಯಾನಾ,ರಾಜ್ಯ ಉಪಾಧ್ಯಕ್ಷ ವಿಶಾಲ್ ನಾಯ್ಕ, ಉ.ಕ ಕರಾಟೆ ಮತ್ತು ಸ್ಪೋಟ್ಸ್​​​ನ ಜಿಲ್ಲಾಧ್ಯಕ್ಷ ದಯಾ ನಾಯ್ಕ,ಪ್ರವೀಣ್ ಕಣ್ಣನ್, ನಾಗಪ್ಪ ನಾಯ್ಕ, ವೆಂಕಟೇಶ ಮೊಗೇರ್, ಅಶೋಕ ನಾಯ್ಕ, ನಾರಾಯಣ ನಾಯ್ಕ, ಪ್ರಭಾಕರ್ ಗೌಡ, ಹೇಮಂತ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button