ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಭಾರತ ಬಂದ ಕರೆ ಇದೊಂದು ರಾಜಕೀಯ‌‌ ಪ್ರೇರಿತ ಬಂದ್ ಕರೆಯಾಗಿದೆ: ನಳಿನ್ ಕುಮಾರ್ ಕಟೀಲ್

ಧಾರವಾಡ: ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ರೈತರು ಈ ಕಾಯ್ದೆಗಳ ಪರವಾಗಿದ್ದಾರೆ. ರೈತರು ಇಡೀ ದೇಶದಲ್ಲಿ ಕಾಯ್ದೆಯ ವಿರೋಧ ಎಲ್ಲೂ ಕೂಡಾ ಗಲಭೆಗಳನ್ನು ಹಾಗೂ ಪ್ರತಿಭಟನೆಗಳನ್ನು ಮಾಡಿಲ್ಲ. ಹಾಗಾಗಿ ಈ ಭಾರತ ಬಂದ್ ಕರೆ ಇದೊಂದು ರಾಜಕೀಯ ಪ್ರೇರಿತ ಬಂದ್ ಕರೆಯಾಗಿದೆ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರು ಯಾರೂ ಕೂಡಾ ಕೃಷಿ ಕಾಯ್ದೆಗಳನ್ನು ವಿರೋಧ ಮಾಡುತ್ತಿಲ್ಲ. ಆದರೆ ರೈತರ ಹೆಸರಿನಲ್ಲಿ ರಾಜಕೀಯ ಉದ್ದೇಶಕ್ಕಾಗಿ ಬಂದ್ ಕರೆ ನೀಡಲಾಗಿದೆ. ರೈತರ ಹೆಸರಿನಲ್ಲಿ ಬೆಳೆ ಬೆಯಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. 2014 ರ ನಂತರ ನರೇಂದ್ರ ಮೋದಿಯವರು ಪ್ರಧಾನಿ ಆದ ಮೇಲೆ ತೆಗೆದುಕೊಳ್ಳುತ್ತಿರುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಲ್ಲೇ ಬರುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನರೇಂದ್ರ ಮೊದಿಯವರು ಪ್ರಧಾನಿ ಆದ ಮೇಲೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಸದ್ಯ ಈಗ ಯಾವುದಾದರೂ ಒಂದು ಮಾರ್ಗದಲ್ಲಿ ಕಾಂಗ್ರೆಸ್‌ನವರು ಉದ್ಯೋಗ ಸೃಷ್ಟಿ ಮಾಡಿಕೊಳ್ಳವುದರಲ್ಲಿ ನಿರತರಾಗಿದ್ದಾರೆ. ಇಂತಹ ಬಂದಗಳ ಮೂಲಕ ಉದ್ಯೋಗ ಸಿಗುತ್ತದೆ ಎನ್ನುವುದನ್ನು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ‌

Related Articles

Leave a Reply

Your email address will not be published. Required fields are marked *

Back to top button