ಪಕ್ಷಾತೀತ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಶ್ರೀರಕ್ಷೆ: ಎಂ ಕೆ ಪ್ರಾಣೇಶ್

ಚಿಕ್ಕಮಗಳೂರು: ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ಒಳಗೊಂಡಂತೆ ಎಲ್ಲಾ ಮತದಾರರ ಬೆಂಬಲದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ ಕೆ ಪ್ರಾಣೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಾವುದೇ ಪಕ್ಷಬೇಧವಿಲ್ಲದೆ 196 ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ವಿತರಣೆಗೆ ಶ್ರಮಿಸಿದ್ದೇನೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಸದಸ್ಯರಿಗೆ ಗೌರವಧನವನ್ನು ರೂ.1000ಕ್ಕೆ ಏರಿಕೆ ಮಾಡಲಾಗಿತ್ತು. ರೂ.2500 ಏರಿಕೆ ಮಾಡುವ ಸಂಬಂಧ ಸಚಿವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು ಪರಿಷತ್ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದು, ಮತ್ತಷ್ಟು ಸೇವೆ ಮಾಡಲು ಸದಸ್ಯನಾಗಿ ಆಯ್ಕೆ ಮಾಡುವಂತೆ ವಿನಂತಿಸಿಕೊಂಡರು.
ಶಾಸಕರಾದ ಬೆಳ್ಳಿಪ್ರಕಾಶ್, ಡಿ ಎಸ್ ಸುರೇಶ್, ಎಂಪಿ ಕುಮಾರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ನಿರಂಜನ್, ಎಚ್.ಡಿ.ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್, ಪ್ರೇಮ್ ಕುಮಾರ್, ದೇವರಾಜಶೆಟ್ಟಿ ಮತ್ತಿತರರು ಇದ್ದರು.




