ಜಿಲ್ಲಾ ಸುದ್ದಿಬಾಗಲಕೋಟೆ

ಪಂಡಿತ ಭೀಮಸೇನ್ ಜೋಶಿ ಜನ್ಮ ಶತಾಬ್ದಿ: ಬಾಗಲಕೋಟೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ

ಬಾಗಲಕೋಟೆ: ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಅವರ ಜನ್ಮ ಶತಾಬ್ದಿಯನ್ನು ಬಾಗಲಕೋಟೆಯಲ್ಲಿ ಕಲಾವಿದರು ಸಂಗೀತೋತ್ಸವ ಕಾರ್ಯಕ್ರಮದ ಮೂಲಕ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು.

ಬಾಗಲಕೋಟೆ ನವನಗರದ ಕಲಾಭವನದಲ್ಲಿ ನಟರಾಜ್ ಸಂಗೀತ ವಿದ್ಯಾಲಯ, ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹುಬ್ಬಳ್ಳಿ ಜಿಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ,ಕ್ಷಮತಾ ಹಾಗೂ ಇನ್ಫೋಸಿಸ್ ,ಎಲ್ ಐಸಿ ಪ್ರಾಯೋಜಕತ್ವದಲ್ಲಿ ಭೀಮಸೇನ ಜೋಶಿ ಅವರ ಜನ್ಮ ಶತಾಬ್ದಿ ಸಂಗೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭೀಮಪಲಾಸ ಎನ್ನುವ ಶೀರ್ಷಿಕೆಯಡಿ ಸಂಗೀತೋತ್ಸವ ಕಾರ್ಯಕ್ರಮ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ಪಂಡಿತ್ ಬಿಂದುಮಾಧವಾಚಾರ್ಯ ಉದ್ಘಾಟಿಸಿದರು. ಆರ್ ಎಚ್ ಮೋರೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪಿಎಚ್ ಪೂಜಾರ, ಬಾಗಲಕೋಟೆ ಎಲ್ ಐಸಿಯ ವ್ಯವಸ್ಥಾಪಕ ಮುರಳೀಧರ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಭೀಮಸೇನ ಜೋಶಿ ಅವರು ಬಾಗಲಕೋಟೆಯೊಂದಿಗೆ ಒಡನಾಟವನ್ನು ಸ್ಮರಿಸಿದರು.

ಪಂಡಿತ್ ಭೀಮಸೇನ ಜೋಶಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ದೇಶದಾದ್ಯಂತ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಭೀಮಫಲಾಸ್ ಎನ್ನುವ ಸಂಘಟನೆಯವರು ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವ ನಿಮಿತ್ತವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಲ್ಲಿ ಬಾಗಲಕೋಟೆಯಲ್ಲಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಒಂದಾಗಿದೆ. ಭೀಮಸೇನ್ ಜೋಶಿ ಅವರು ಚಿಕ್ಕವರಿದ್ದಾಗ ಬಾಗಲಕೋಟೆಯಲ್ಲಿದ್ರು ಎಂದು ಅವರ ಸಮಕಾಲೀನರು ಹೇಳುತ್ತಿದ್ದಾರೆ. ಜೊತೆಗೆ ಭೀಮಸೇನ್ ಜೋಶಿ ಅವರು ಬಾಗಲಕೋಟೆಯ ರಾಮಾಚಾರ್ಯ ಜೋಶಿ ಅವರ ಬಳಿ ದಾಸವಾಣಿ ಸಂಗೀತ ಕಲಿತಿದ್ದಾರೆ. ಬಾಗಲಕೋಟೆಯೊಂದಿಗೆ ಭೀಮಸೇನ ಜೋಶಿ ಅವರ ಅವಿನಾಭಾವ ಸಂಬಂಧವಿತ್ತು. ಹೀಗಾಗಿ ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ಸಂಗತಿ.

ಬಳಿಕ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಹಾರ್ಮೋನಿಯಂ ವಾದಕ ಡಾಕ್ಟರ್ ರವೀಂದ್ರ ಕಾಟೋಟಿ ತಮ್ಮ ಕಲೆಯ ಮೂಲಕ ಭೀಮಸೇನ ಜೋಶಿ ಅವರಿಗೆ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು ರಾಷ್ಟ್ರೀಯ ತಬಲಾವಾದಕ ಕೇಶವ್ ಜೋಶಿ , ಗಾಯಕ ಜಯತೀರ್ಥ ಮೇವುಂಡಿ ಅವರು ತಮ್ಮ ಹಾಡುಗಳ ಮೂಲಕ ಸ್ವರ ಶ್ರದ್ಧಾಂಜಲಿ ಸಲ್ಲಿಸಿ, ನೆರೆದ ಜನರನ್ನು ರಂಜಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button