ಭಟ್ಕಳ : ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಪುನೀತ್ ರಾಜ್ ಕುಮಾರ್ ಅವರಿಗೆ ಕ್ಷೀರಾಭಿಷೇಕ

ಕಾರವಾರ : ಭಟ್ಕಳ ತಾಲೂಕಿನ ಕೋಣಾರ್ ಕ್ರಾಸ್ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸರ್ಪನಕಟ್ಟೆ ಕೋಣಾರ್ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 22 ಅಡಿ ಉದ್ದದ ಪುನೀತ್ ರಾಜಕುಮಾರ್ ಕಟೌಟ್ ಗೆ ಕ್ಷೀರಾಭಿಷೇಕ ಮತ್ತು ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು
ತಾಲೂಕಿನಾಧ್ಯಂತ ಸಮಾಜಮುಖಿ ನಟ ಪುನೀತ್ ರಾಜಕುಮಾರ್ ಅವರ ದೇಹಾಂತ್ಯದ ಕಾರಣ ಸಂತಾಪಗಳು ಕೇಳಿಬರುತ್ತಿದ್ದು,ರವಿವಾರವಾದ ಇಂದು ಕೊಣಾರ್ ಕ್ರಾಸ್ ಬಳಿಯಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ರಿಕ್ಷಾ ಚಾಲಕ ಮಾಲಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಅವರು,ಸಮಾಜಕ್ಕೆ ಚಿತ್ರನಟ ಪುನೀತ್ ರಾಜಕುಮಾರ್ ಅವರ ಕೊಡುಗೆ ಅಭೂತಪೂರ್ವವಾಗಿದೆ. ಅವರು ಬಡವರಿಗಾಗಿ, ಅನಾಥರಿಗಾಗಿ, ವೃದ್ದರಿಗೆ, ಮಹಿಳೆಯರಿಗೆ ನೆರವಾಗಲು ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ರಾಜಕುಮಾರ್ ಕುಟುಂಬ ಸಮಾಜಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮಾಲಕ ಸಂಘದ ಲೋಕೇಶ್ ನಾಯ್ಕ, ನರಸಿಂಹ ನಾಯ್ಕ, ನಾರಾಯಣ ನಾಯ್ಕ, ವೆಂಕಟರಮಣ ನಾಯ್ಕ, ರಾಜೇಶ ನಾಯ್ಕ, ಸುಕ್ರಪ್ಪ ನಾಯ್ಕ, ತಿಮ್ಮಯ್ಯ ನಾಯ್ಕ, ರವಿ ನಾಯ್ಕ, ಸುಬ್ರಾಯ ನಾಯ್ಕ, ಮಂಜು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.




